alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೆ ಸಂಬಂಧಿಸಿದ ಈ ಪ್ರಶ್ನೆಯನ್ನು ಹೆಚ್ಚಾಗಿ ಕೇಳ್ತಾರೆ ಜನ

ಇತ್ತೀಚಿನ ದಿನಗಳಲ್ಲಿ ಗೂಗಲ್ ಎಲ್ಲರ ಸಂಗಾತಿಯಾಗಿದೆ. ಸಣ್ಣ-ದೊಡ್ಡ ಸಮಸ್ಯೆಗಳಿಗೆ ಗೂಗಲ್ ನಲ್ಲಿ ಪರಿಹಾರ ಹುಡುಕುವ ಪ್ರಯತ್ನ ನಡೆಯುತ್ತದೆ. ಗೂಗಲ್ ನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ಎಂದೇ ನಂಬಲಾಗಿದೆ. ಸೆಕ್ಸ್ ವಿಚಾರದಲ್ಲಿಯೂ ಗೂಗಲ್ ಹಿಂದೆ ಬಿದ್ದಿಲ್ಲ. ಸೆಕ್ಸ್ ನ ಯಾವ ಪ್ರಶ್ನೆಯನ್ನು ಜನ ಗೂಗಲ್ ನಲ್ಲಿ ಹೆಚ್ಚಾಗಿ ಕೇಳ್ತಾರೆಂಬ ಬಗ್ಗೆ ಡ್ಯುರಾಕ್ಸ್ ಸಮೀಕ್ಷೆ ನಡೆಸಿ ಉತ್ತರ ಕಂಡುಕೊಂಡಿದೆ.

ಸಮೀಕ್ಷೆ ಪ್ರಕಾರ ಗೂಗಲ್ ನಲ್ಲಿ ಅತಿ ಹೆಚ್ಚು ಕೇಳುವ ಪ್ರಶ್ನೆ ಜಿ-ಸ್ಪಾಟ್ ಎಲ್ಲಿರುತ್ತೆ ಎಂಬುದು. ವಿಶೇಷವೆಂದ್ರೆ ಗೂಗಲ್ ನಲ್ಲಿ ಈ ಪ್ರಶ್ನೆಗೂ ಉತ್ತರವಿದೆ. ವಜಿನಾದಲ್ಲಿ 2-3 ಇಂಚು ಒಳಗಿರುತ್ತದೆ. ಈ ಭಾಗವನ್ನು ಉತ್ತೇಜಿಸಿದಾಗ ಶಾರೀರಿಕ ಸಂಬಂಧದಲ್ಲಿ ಸಂಪೂರ್ಣ ತೃಪ್ತಿ ಸಿಗುತ್ತದೆ ಎಂದು ಗೂಗಲ್ ಉತ್ತರ ನೀಡಿದೆ.

ಆದ್ರೆ ಗೂಗಲ್ ನೀಡಿದ ಉತ್ತರ ಸರ್ವಶ್ರೇಷ್ಠವೆಂದು ಹೇಳಲು ಸಾಧ್ಯವಿಲ್ಲ. ಯಾಕೆಂದ್ರೆ ಕಿಂಗ್ಸ್ ಕಾಲೇಜಿನ ಸಂಶೋಧಕರು ಜಿ-ಸ್ಪಾಟ್ ಇರುವ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದಿದ್ದಾರೆ. ಇನ್ನೊಂದು ಸಂಶೋಧನೆಯಲ್ಲಿ ಶೇಕಡಾ 60ರಷ್ಟು ಮಹಿಳೆಯರಿಗೆ ಜಿ-ಸ್ಪಾಟ್ ಇರುತ್ತೆ. ಆದ್ರೆ ಅದನ್ನು ಹುಡುಕಬೇಕು ಎಂದಿದೆ. ಒಟ್ಟಿನಲ್ಲಿ ಗೂಗಲ್ ಗೆ ಅತಿ ಹೆಚ್ಚು ಜನರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...