alex Certify
ಕನ್ನಡ ದುನಿಯಾ       Mobile App
       

Kannada Duniya

39 ಪತ್ನಿಯರು 94 ಮಕ್ಕಳನ್ನು ಹೊಂದಿದ್ದಾನೆ ಈ ವ್ಯಕ್ತಿ

ಜಿಯೋನಾ ಚಾನ್ ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. 72 ವರ್ಷದ ಜಿಯೋನ್ 39 ಪತ್ನಿಯರು ಹಾಗೂ 94 ಮಕ್ಕಳನ್ನು ಹೊಂದಿದ್ದಾನೆ. ಎಲ್ಲ ಸೇರಿ 181 ಜನರ ಜೊತೆ ಈತ ವಾಸವಾಗಿದ್ದಾನೆ.

ಮಿಜೋರಾಮ್ ನ ಭಕ್ತಿವಾಂಗ್ ಎಂಬಲ್ಲಿ ನಾಲ್ಕು ಅಂತಸ್ತಿನ ಮನೆಯಲ್ಲಿ ಈತ ವಾಸವಾಗಿದ್ದಾನೆ. ಈ ಮನೆಯಲ್ಲಿ 100 ಕೊಠಡಿಗಳಿವೆ. ಪ್ರತಿಯೊಬ್ಬ ಹೆಂಡತಿ ಹಾಗೂ ಮಕ್ಕಳಿಗೆ ಪ್ರತ್ಯೇಕ ಕೊಠಡಿ ನೀಡಿದ್ದಾನೆ. ತನ್ನ ಮನೆಯಲ್ಲಿ ತಾನೇ ರಾಜನಾಗಿರುವ ಜಿಯೋನಾ ಆಜ್ಞೆಯಿಲ್ಲದೆ ಒಂದು ಕಡ್ಡಿಯೂ ಅಲ್ಲಾಡುವುದಿಲ್ಲ.

ಗ್ರಾಮದಲ್ಲಿ ಯಾವುದಾದ್ರೂ ಹುಡುಗಿ ಇಷ್ಟವಾದ್ರೆ ಜಿಯೋನಾ ಪತ್ರ ಬರೆದು ಇಲ್ಲ ತನ್ನ ಪತ್ನಿಯರು, ಸಂಬಂಧಿಕರಿಂದ ಹುಡುಗಿ ಮುಂದೆ ಮದುವೆ ಪ್ರಸ್ತಾವ ಇಡ್ತಾನೆ. ಹುಡುಗಿ ಓಕೆ ಅಂದ್ರೆ ಮದುವೆಯಾಗ್ತಾನೆ. 17ನೇ ವಯಸ್ಸಿನಲ್ಲಿ ತನಗಿಂತ 3 ವರ್ಷ ದೊಡ್ಡ ಹುಡುಗಿಯನ್ನು ಜಿಯೋನಾ ಮದುವೆಯಾಗಿದ್ದ. ನಂತ್ರ ಮದುವೆ ಸರಣಿ ಮುಂದುವರೆಯಿತು.

ಈಗ ಮಕ್ಕಳು, ಮೊಮ್ಮಕ್ಕಳನ್ನು ಹೊಂದಿರುವ ಜಿಯೋನಾಗೆ ಅಮೆರಿಕಾ ಪತ್ನಿ ತರುವ ಆಸೆಯಂತೆ. ಕೆಲ ವರ್ಷಗಳಿಂದ ಮದುವೆಯಾಗದೆ ಇರುವ ಜಿಯೋನಾ ಅಮೆರಿಕಾ ಹುಡುಗಿ ಹುಡುಕಾಟದಲ್ಲಿದ್ದಾನೆ. ಮನೆಯ ಕೆಳಗಿನ ಮಹಡಿಯಲ್ಲಿ ಡಬಲ್ ಬೆಡ್ ರೂಂನಲ್ಲಿ ಜಿಯೋನಾ ವಾಸವಾಗಿದ್ದಾನೆ. ವಾರಕ್ಕೆ ಒಬ್ಬರಂತೆ ಪತ್ನಿಯರು ಇವನ ಜೊತೆ ಇರಬೇಕಾಗುತ್ತದೆ.

ಕುಟುಂಬಕ್ಕಾಗಿಯೇ ಶಾಲೆ ಶುರುಮಾಡಿದ್ದಾನೆ ಜಿಯೋನಾ. ಬೆಳಿಗ್ಗೆ ಬೇಗ ಏಳುವ ಮಕ್ಕಳು ಮನೆ ಮುಂದಿರುವ ಮೈದಾನದಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ. ನಂತ್ರ ಸ್ಕೂಲಿಗೆ ಹೋಗಬೇಕು. ಜಿಯೋನಾ ಸಹೋದರ ಶಾಲೆಯ ಹೆಡ್ ಮಾಸ್ಟರ್. ಜಿಯೋನಾ ಕೆಲ ಪತ್ನಿಯರು ಹಾಗೂ ಮಕ್ಕಳೇ ಶಿಕ್ಷಕರು.

ಜಿಯೋನಾ ಅಡುಗೆ ಮನೆ ದೊಡ್ಡ ಹೊಟೇಲ್ ನಂತಿದೆ. ಇಲ್ಲಿ ಕೆಲ ಪತ್ನಿಯರು ಹಾಗೂ ಮಕ್ಕಳು ಕೆಲಸ ಮಾಡ್ತಾರೆ. ಮನೆ ಕ್ಲೀನಿಂಗ್ ಕೆಲಸವನ್ನೂ ಪತ್ನಿಯರೇ ಮಾಡ್ತಾರೆ. ಮನೆ, ಅಡುಗೆ ಮನೆ ಜವಾಬ್ದಾರಿಯನ್ನು ಮೊದಲ ಪತ್ನಿ ನೋಡಿಕೊಳ್ತಾಳೆ. ಜಿಯೋನಾ ಕೃಷಿ ಭೂಮಿ ಹೊಂದಿದ್ದು, ಅಲ್ಲಿಯೇ ತರಕಾರಿಗಳನ್ನು ಬೆಳೆಯಲಾಗುತ್ತದೆ. ಪಿಠೋಪಕರಣದ ಕೆಲಸವನ್ನು ಈ ಕುಟುಂಬ ನೋಡಿಕೊಳ್ಳುತ್ತದೆ.

ಜಿಯೋನಾ ಮನೆಯಲ್ಲಿ ಕಂಪ್ಯೂಟರ್ ಇದೆ. ಇದ್ರಲ್ಲಿ ಎಲ್ಲ ಪತ್ನಿಯರು, ಅವರ ಮಕ್ಕಳ ಬಗ್ಗೆ ಮಾಹಿತಿ ಸಿಗುತ್ತದೆ. ಹಾಗೆ ಖರ್ಚು, ವೆಚ್ಚದ ಬಗ್ಗೆಯೂ ಸರಿಯಾಗಿ ಲೆಕ್ಕವಿಟ್ಟಿದ್ದಾನೆ ಜಿಯೋನಾ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...