alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದಿಂಬು ಇದ್ದರೆ ಕಂಡ ಕಂಡಲ್ಲಿ ಕೋಳಿ ನಿದ್ದೆ ಮಾಡಬಹುದು !

hoodie-pillow

ದಣಿದು ಆಯಾಸವಾದ ದೇಹಕ್ಕೆ ವಿಶ್ರಾಂತಿ ಬೇಕೇ ಬೇಕು. ಆದರೆ, ಎಲ್ಲೆಂದರಲ್ಲಿ ನಿದ್ದೆ ಮಾಡಲು ಆಗುವುದಿಲ್ಲ. ಒಂದು ವೇಳೆ ನಿದ್ದೆ ಮಾಡಬೇಕು ಎಂದರೂ ದಿಂಬಿನ ಸಮಸ್ಯೆ. ಕೆಲವರಿಗೆ ದಿಂಬು ಇಲ್ಲದಿದ್ದರೆ ನಿದ್ದೆಯೇ ಬರುವುದಿಲ್ಲ. ಅಂತಹವರಿಗಾಗಿಯೇ ಈ ದಿಂಬು ಬಂದಿದೆ.

ನಿದ್ದೆ ಮಾಡುವುದು ಎಂದರೆ ಕೊಂಚ ವಿಶ್ರಾಂತಿ ಬಯಸಿದಂತೆ. ಸುಖದ ನಿದ್ದೆಗೆ ನಿಮಗೆ ದಿಂಬು ಸಾಥ್ ನೀಡುತ್ತದೆ. ಕೋಳಿ ನಿದ್ದೆ ಮಾಡುವವರಿಗಂತೂ ಅನುಕೂಲಕರವಾಗಿದೆ ಈ ದಿಂಬು. ‘ಹಿಪ್ನೋಸ್ ಹೂಡಿ ದಿಂಬು’ ಎಂದು ಕರೆಯಲ್ಪಡುವ ಈ ದಿಂಬನ್ನು ನಿಮ್ಮ ಕುತ್ತಿಗೆಗೆ ಸರಿ ಹೊಂದುವಂತೆ ರೂಪಿಸಲಾಗಿದೆ. ಇದನ್ನು ಮಡಚಿ ಎಲ್ಲಿಗೆ ಬೇಕಾದರೂ ಒಯ್ಯಬಹುದಾಗಿದ್ದು, ಬಳಸುವಾಗ ಸ್ವಲ್ಪ ಗಾಳಿ ಊದಿದರೆ ಸಾಕು. ಇದನ್ನು ಬಳಸುವಾಗ ಕೂಡ ದಿಂಬು ಇದೆ ಎಂದೇ ಯಾರಿಗೂ ಗೊತ್ತಾಗಲ್ಲ. ಊದಲು ಸುಲಭ, ಬಳಸಲೂ ಸುಲಭವಾಗಿದೆ ಎಂದು ಹೇಳಲಾಗಿದೆ.

ಬರೋಬ್ಬರಿ ಎರಡು ವರ್ಷದ ಸಂಶೋಧನೆ ಬಳಿಕ ಈ ದಿಂಬನ್ನು ಸಿದ್ಧಪಡಿಸಲಾಗಿದೆಯಂತೆ. ಅಂದ ಹಾಗೇ ಈ ದಿಂಬಿನ ಜೊತೆಗೆ ಜರ್ಕಿನ್ ಕೂಡ ಸಿಗುತ್ತಂತೆ. ಈ ದಿಂಬನ್ನು ಖರೀದಿಸಿದರೆ ಕಂಡ ಕಂಡಲ್ಲಿ ಕೋಳಿ ನಿದ್ದೆ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...