alex Certify
ಕನ್ನಡ ದುನಿಯಾ       Mobile App
       

Kannada Duniya

ಆ ದೇವಸ್ಥಾನಕ್ಕೆ ಹೋಗಲು ಹೆದರ್ತಾರೆ ಜನ..!

shivling

ಭೂತ, ಪ್ರೇತಕ್ಕೆ ಹೆದರುವ ಜನರಿದ್ದಾರೆ. ಈ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುವಂತೆ ದೇವರ ಮೊರೆ ಹೋಗ್ತಾನೆ ಭಕ್ತ. ನೆಮ್ಮದಿ, ಸುರಕ್ಷಣೆ ನೀಡುವ ಸ್ಥಳವೆಂದ್ರೆ ಅದು ದೇವಸ್ಥಾನ ಎಂಬ ನಂಬಿಕೆ ಕೂಡ ಇದೆ. ಆದ್ರೆ ಉತ್ತರಾಖಂಡ್ ನ ಒಂದು ದೇವಸ್ಥಾನಕ್ಕೆ ಮಾತ್ರ ಭಕ್ತರು ಬರುವುದೇ ಇಲ್ಲ. ಅಲ್ಲಿಗೆ ಹೋಗಲು ಹೆದರ್ತಾರೆ ಜನ.

ಆ ಶಿವನ ದೇವಸ್ಥಾನ ಉತ್ತರಾಖಂಡ್ ನ ಹಥಿಯಾ ನೌಲ್ ಎಂಬ ಸ್ಥಳದಲ್ಲಿದೆ. ಆ ದೇವಸ್ಥಾನದ ಬಗ್ಗೆ ಒಂದು ಕಥೆ ಇದೆ. ಆ ಊರಿನಲ್ಲಿ ಒಬ್ಬ ಶಿಲ್ಪಿಯಿದ್ದನಂತೆ. ಆತನಿಗೆ ಒಂದು ಕೈ ಇರಲಿಲ್ಲವಂತೆ. ಆತನನ್ನು ನೋಡಿ ಗ್ರಾಮದ ಜನರು ನಗುತ್ತಿದ್ದರಂತೆ. ಒಂದು ಕೈನಲ್ಲಿ ಹೇಗೆ ಕೆಲಸ ಮಾಡ್ತಾನೆ ಎಂದು ಗೇಲಿ ಮಾಡುತ್ತಿದ್ದರಂತೆ.

ಗ್ರಾಮದವರ ಮಾತಿನಿಂದ ಬೇಸರಗೊಂಡಿದ್ದ ಶಿಲ್ಪಿ ಒಂದು ದಿನ ರಾತ್ರಿ ಗ್ರಾಮದ ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿದ್ದಾನೆ. ರಾತ್ರಿ ಪೂರ್ತಿ ಒಂದು ಕಲ್ಲನ್ನು ಕೆತ್ತಿ ಶಿವಲಿಂಗ ನಿರ್ಮಾಣ ಮಾಡಿದ್ದಾನೆ. ಜೊತೆಗೆ ದೇವಸ್ಥಾನ ಕಟ್ಟಿದ್ದಾನೆ. ಬೆಳಗಾಗ್ತಾ ಇದ್ದಂತೆ ದೇವಸ್ಥಾನ ನೋಡಿದ ಗ್ರಾಮಸ್ಥರ ದಂಗಾಗಿದ್ದಾರೆ. ಆದ್ರೆ ದೇವಸ್ಥಾನ ನಿರ್ಮಿಸಿದ ನಂತ್ರ ಆ ಶಿಲ್ಪಿ ಊರಿನಲ್ಲಿ ಕಾಣಿಸಿಕೊಂಡಿಲ್ಲವಂತೆ.

ಶಿವನ ದೇವಸ್ಥಾನ ಮುಖ ವಿರುದ್ಧ ದಿಕ್ಕಿನಲ್ಲಿದೆ. ಅಲ್ಲಿ ಪೂಜೆ ಮಾಡುವುದರಿಂದ ಆಪತ್ತು ಬರುವ ಸಾಧ್ಯತೆ ಇದೆ ಎಂದು ಪಂಡಿತರು ಹೇಳಿದ್ದಾರೆ. ಹಾಗಾಗಿ ಅಲ್ಲಿಂದ ಇಲ್ಲಿಯವರೆಗೂ ಶಿವಲಿಂಗಕ್ಕೆ ಪೂಜೆ ಮಾಡಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...