alex Certify
ಕನ್ನಡ ದುನಿಯಾ       Mobile App
       

Kannada Duniya

ಆದಿಲಾಬಾದ್ ನಲ್ಲಿ 230 ಪೊಲೀಸರ ಸಿನಿಮಾ ಡೇ ಔಟ್

police

ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ 230 ಮುಖ್ಯಪೇದೆಗಳಿಗೆ ಒಂದೇ ದಿನ ರಜೆ ಕೊಡಲಾಗಿತ್ತು, ಪೊಲೀಸರು ಕೂಡ ಸಿನಿಮಾ ನೋಡಲಿ ಅನ್ನೋ ಕಾರಣಕ್ಕೆ ಡೇ ಆಫ್ ನೀಡಲಾಗಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ‘ಹೆಡ್ ಕಾನ್ಸ್ ಟೇಬಲ್ ವೆಂಕಟ್ರಾಮಯ್ಯ’.

ಸಿನಿಮಾ ಬಗ್ಗೆ ಪತ್ರಿಕೆಗಳಲ್ಲಿ ವಿಮರ್ಶೆ ಓದಿದ ಆದಿಲಾಬಾದ್  ಡಿಎಸ್ಪಿ ಪೇದೆಗಳಿಗೆಲ್ಲ ಒಂದು ದಿನ ರಜೆ ಕೊಟ್ಟು ಸಿನಿಮಾ ವೀಕ್ಷಣೆಗೆ ಕಳಿಸಲೇಬೇಕು ಅಂತಾ ನಿರ್ಧರಿಸಿದ್ರು. ಸಿನಿಮಾದಲ್ಲಿ ಅತ್ಯುತ್ತಮ ಸಂದೇಶವಿದ್ದು, ಪೊಲೀಸರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಸಮಗ್ರತೆಯನ್ನು ಹೆಚ್ಚಿಸಲಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಸಂಕ್ರಾಂತಿ ಹಬ್ಬಕ್ಕಾಗ್ಲಿ, ಹೊಸವರ್ಷಕ್ಕಾಗ್ಲಿ ಯಾವುದಕ್ಕೂ ಪೊಲೀಸರಿಗೆ ರಜೆ ಸಿಕ್ಕಿರಲಿಲ್ಲ. ಹಬ್ಬದ ದಿನವೂ ಅನಿವಾರ್ಯವಾಗಿ ಅವರು ಡ್ಯೂಟಿ ಮಾಡಿದ್ರು. ಹಾಗಾಗಿ ಈ ಒತ್ತಡದಿಂದ ರಿಲ್ಯಾಕ್ಸ್ ಆಗಿ ಕುಟುಂಬದವರ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಲಿ ಅಂತಾ ರಜೆ ನೀಡಲಾಗಿತ್ತು. ಪೊಲೀಸರಿಗಾಗಿಯೇ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಆರ್.ನಾರಾಯಣಮೂರ್ತಿ ಹಾಗೂ ಜಯಸುಧಾ ಅಭಿನಯದ ಚಿತ್ರ ಇದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...