alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತರಿಗಿಂತ ಕಾಂಡೋಮ್ ಹೆಚ್ಚು ಬಳಸ್ತಾರೆ ಅವಿವಾಹಿತ ಮಹಿಳೆಯರು..!

ಅವಿವಾಹಿತ ಹಾಗೂ ಸೆಕ್ಸ್ ನಲ್ಲಿ ಸಕ್ರಿಯವಾಗಿರುವ ಮಹಿಳೆಯರು ಲೈಂಗಿಕ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಲು ಶುರುಮಾಡಿದ್ದಾರಂತೆ. ಈ ಬಗ್ಗೆ ನಡೆದ ಸರ್ವೆಯೊಂದು ಈ ಸಂಗತಿಯನ್ನು ತಿಳಿಸಿದೆ. ಆರೋಗ್ಯ ಸಚಿವಾಲಯ ನಡೆಸಿದ ಸರ್ವೆ ಪ್ರಕಾರ, 2015-2016 ರಲ್ಲಿ ಹಿಂದಿನ 10 ವರ್ಷಕ್ಕಿಂತ ಶೇಕಡಾ 2-12 ರಷ್ಟು ಕಾಂಡೋಮ್ ಬಳಕೆದಾರರ ಸಂಖ್ಯೆ ಹೆಚ್ಚಿದೆಯಂತೆ.

ಸರ್ವೆ ಪ್ರಕಾರ ವಿವಾಹಿತ ಮಹಿಳೆಯರಿಗಿಂತ ಅವಿವಾಹಿತ ಮಹಿಳೆಯರು ಹೆಚ್ಚಾಗಿ ಕಾಂಡೋಮ್ ಬಳಸ್ತಿದ್ದಾರೆ. ಅವ್ರ ವಯಸ್ಸು 15-49 ವರ್ಷ ಒಳಗಿದ್ದು, ಅದ್ರಲ್ಲೂ 20-24 ವರ್ಷದೊಳಗಿನ ಅವಿವಾಹಿತ ಮಹಿಳೆಯರು ಹೆಚ್ಚು ಕಾಂಡೋಮ್ ಬಳಸ್ತಿದ್ದಾರೆಂದು ಸರ್ವೆಯಲ್ಲಿ ಹೇಳಲಾಗಿದೆ.

ಗರ್ಭ ನಿರೋಧಕದ ಹೊಣೆ ಮಹಿಳೆಯರದ್ದೆಂದು ಸರ್ವೆಯಲ್ಲಿ ಪಾಲ್ಗೊಂಡ ಪುರುಷರು ಹೇಳಿದ್ದಾರೆ. ಲೈಂಗಿಕ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿರುವ ಮಹಿಳೆಯರು ಕಾಂಡೋಮ್ ಬಳಕೆ ಹೆಚ್ಚು ಮಾಡಿದ್ದಾರೆ. ಖುಷಿಯ ವಿಷಯವೆಂದ್ರೆ ಮದುವೆಯಾದ ಶೇಕಡಾ 99ರಷ್ಟು ಮಹಿಳೆ ಹಾಗೂ ಪುರುಷರಿಗೆ ಲೈಂಗಿಕ ಸುರಕ್ಷತೆ ಬಗ್ಗೆ ಜ್ಞಾನವಿದೆ. ಹೆಚ್ಚಾಗಿ ಕಾಂಡೋಮ್ ಮೇಲೆ ಜನರು ಭರವಸೆಯಿಡುತ್ತಿದ್ದಾರೆ.

ಕಾಂಡೋಮ್ ಸೇರಿದಂತೆ ಉಳಿದ ಲೈಂಗಿಕ ಸುರಕ್ಷತೆಗಳನ್ನು ಬಳಸುವ ರಾಜ್ಯಗಳಲ್ಲಿ ಪಂಜಾಬ್ ಮುಂದಿದೆ. ಮಣಿಪುರ, ಬಿಹಾರ್, ಮೇಘಾಲಯಗಳಲ್ಲಿ ಅತಿ ಕಡಿಮೆ ಗರ್ಭನಿರೋಧಕಗಳನ್ನು ಬಳಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...