alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರ ಲೀಟರ್ ಎದೆಹಾಲು ದಾನ ಮಾಡಿದ ಮಹಿಳೆ

ರಕ್ತದಾನ ಮಹಾದಾನ. ರಕ್ತದಾನ ಇನ್ನೊಬ್ಬರಿಗೆ ಜೀವ ದಾನ ಮಾಡಿದಂತೆ. ರಕ್ತದಾನಿಗಳ ಬಗ್ಗೆ ನಾವು-ನೀವೆಲ್ಲ ಕೇಳಿರುತ್ತೇವೆ. ಕೆಲವೊಮ್ಮೆ ನಾವೇ ರಕ್ತದಾನ ಮಾಡಿರುತ್ತೇವೆ. ಆದ್ರೆ ಎದೆ ಹಾಲು ದಾನಿಗಳ ಬಗ್ಗೆ ನೀವು ಕೇಳಿದ್ದೀರಾ? ಯಸ್ ಅಮೆರಿಕಾರ ಬೆವರ್ಟನ್ ನಿವಾಸಿ 29 ವರ್ಷದ ಎಲಿಜಬೆತ್ ಆಂಡರ್ಸನ್ ಕೆಲ ವರ್ಷಗಳಿಂದ ಎದೆ ಹಾಲು ದಾನ ಮಾಡುವ ನೂರಾರು ಶಿಶುಗಳಿಗೆ ತಾಯಿಯಾಗಿದ್ದಾಳೆ.

ತಾಯಿಯ ಎದೆ ಹಾಲು ಮಕ್ಕಳಿಗೆ ಅಮೃತದ ಸಮಾನ. ಆದ್ರೆ ಬೇರೆ ಬೇರೆ ಕಾರಣಕ್ಕೆ ಅನೇಕ ಮಕ್ಕಳು ತಾಯಿ ಹಾಲಿನಿಂದ ವಂಚಿತರಾಗ್ತಾರೆ. ಇದು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ತಾಯಿ ಎದೆಹಾಲಿನಿಂದ ವಂಚಿತರಾಗಿರುವ ಮಕ್ಕಳಿಗೆ ಎಲಿಜಬೆತ್ ಎದೆ ಹಾಲು ನೀಡುವ ಕೆಲಸ ಮಾಡುತ್ತಿದ್ದಾಳೆ.

ಈವರೆಗೆ ಎಲಿಜಬೆತ್ ಸುಮಾರು 2 ಸಾವಿರ ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾಳೆ. ಮೊದಲ ಹೆರಿಗೆ ನಂತ್ರ ಎಲಿಜಬೆತ್ ಹೆಚ್ಚಾದ ಎದೆ ಹಾಲನ್ನು ಚೆಲ್ಲುತ್ತಿದ್ದಳಂತೆ. ಎರಡನೇ ಮಗುವಾದಾಗ ಎಲಿಜಬೆತ್ ಗೆ ಜ್ಞಾನೋದಯವಾಗಿದೆ. ಎದೆ ಹಾಲು ವಂಚಿತ ಮಕ್ಕಳಿಗೆ ತನ್ನ ಎದೆ ಹಾಲು ನೀಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾಳೆ. ನಂತ್ರ ಎದೆ ಹಾಲು ನೀಡಲು ಮುಂದಾಗಿದ್ದಾಳೆ.

ಫೇಸ್ಬುಕ್, ಎನ್ಜಿಒ ಮೂಲಕ ಶಿಶುಗಳಿಗೆ ಎದೆ ಹಾಲನ್ನು ನೀಡ್ತಾಳೆ. ದಿನಕ್ಕೆ 6 ಲೀಟರ್ ಹಾಲು ಪಂಪ್ ಮಾಡ್ತಾಳಂತೆ ಎಲಿಜಬೆತ್. ಇದ್ರಿಂದ ಸಾಕಷ್ಟು ಆರೋಗ್ಯ ತೊಂದರೆ ಎದುರಾಗಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...