alex Certify ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ.

ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ ಮನೆಯಲ್ಲಿ ಕೂಲರ್‌ ಅಥವಾ ಎಸಿ ಇಡುವುದು ಇದೀಗ ಅನಿವಾರ್ಯವಾಗಿದೆ. ಹಿಂದೆಲ್ಲ ಈ ಅವಶ್ಯಕತೆ ಕೇವಲ ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರವಿತ್ತು.

ಆದರೆ ಇದೀಗ ದಕ್ಷಿಣದ ಜಿಲ್ಲೆಗಳ ನಗರಗಳಲ್ಲೂ ಪರಿಸ್ಥಿತಿ ಇದೇ ಆಗಿದೆ. ಕೂಲರ್‌ ಇಲ್ಲದೇ, ಮನೆಯನ್ನು ಕೊಂಚ ಮಟ್ಟಿಗೆ ತಂಪಾಗಿರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಗಾಳಿ ಮನೆಯೊಳಗೆ ಓಡಾಡಲಿ

ಮನೆಯಲ್ಲಿ ಪ್ರತಿ ರೂಂನಲ್ಲಿ ಸೀಲಿಂಗ್‌ ಫ್ಯಾನ್‌ ಹಾಗೂ ಎಕ್ಸ್‌ಹಾಸ್ಟ್‌ ಫ್ಯಾನ್‌ ಬಳಸುವುದು ಒಳಿತು. ಮನೆಯಲ್ಲಿ ಯಾವುದೇ ಬಾಗಿಲುಗಳನ್ನು ಹಾಕಿಡುವುದು ಬೇಡ. ಸೂರ್ಯೋದಯ ಆದ ಮೇಲೆ ಯಾವುದೇ ಕಾರಣಕ್ಕೂ ಕಿಟಕಿಗಳನ್ನು ಹಾಕದಿರಿ. ಹೊರಗಿನ ತಾಪಮಾನ ಮನೆಯೊಳಗಿನ ತಾಪಮಾನದ ಗಾಳಿ ಕಡಿಮೆ ಇದ್ದರೆ, ಮನೆಯೊಳಗೆ ಹೊರಗಿನ ಗಾಳಿ ಪ್ರವೇಶವಾಗುತ್ತದೆ. ಹೊಸ ಗಾಳಿ ಏರ್ ಸರ್ಕ್ಯುಲೇಷನ್‌ ಹೆಚ್ಚಿಸುತ್ತದೆ. ಒಳಗಿನ ಗಾಳಿಯನ್ನು ಎಕ್ಸ್‌ಹಾಸ್ಟ್‌ ಫ್ಯಾನ್‌ ಹೊರಹಾಕುತ್ತದೆ.

ನಿಮ್ಮ ಮನೆ ಟಾಪ್‌ ಫ್ಲೋರ್‌ ನಲ್ಲಿದ್ದರೆ ಅಥವಾ ಮನೆಯಲ್ಲಿ ಬಾಲ್ಕನಿ ಇದ್ದರೆ, ಎರಡು ಬಕೆಟ್‌ ನೀರು ಹಾಕಿ ಬಿಡುವುದು ಒಳಿತು. ಇದು ಕೇವಲ ನೆಲ ತಂಪಿರಿಸುವುದಕ್ಕೆ ಮಾಡಬೇಕಾದ ಕಾರ್ಯ. ಹೀಗಾಗಿ ವಾಷಿಂಗ್‌ ಮಷೀನ್‌, ಆರ್‌ಒ ದಿಂದ ಹೋಗುವ ವೇಸ್ಟ್‌ ನೀರನ್ನು ನೆಲ ಅಥವಾ ಟೆರೆಸ್‌ಗೆ ಹಾಕಿ. ದಿನದಲ್ಲಿ ಎರಡು ಮೂರು ಬಾರಿ ಈ ರೀತಿ ಮಾಡುವುದು ಸ್ವಲ್ಪ ತಂಪು ನೀಡುತ್ತದೆ.

ಮನೆಯಲ್ಲಿ ಅನಾವಶ್ಯಕ ಲೈಟ್‌ ಗಳನ್ನು ಉರಿಸಲೇ ಬೇಡಿ. ವಿದ್ಯುತ್‌ ಹೆಚ್ಚು ಶಾಖ ಉತ್ಪತ್ತಿ ಮಾಡುವುದರಿಂದ, ಲೈಟ್‌ ಉರಿಸುವುದು ಇನ್ನಷ್ಟು ಉರಿ ಸೆಕೆಯನ್ನು ಉತ್ಪತ್ತಿ ಮಾಡುತ್ತದೆ. ಹೀಗಾಗಿ ಅನಾವಶ್ಯಕವಾಗಿ ಲೈಟ್‌ ಉರಿಸುವುದು ಮಾಡಲೇ ಬೇಡಿ. ವಿದ್ಯುತ್‌ ಉಳಿಯುವುದು ಮಾತ್ರ ಅಲ್ಲ, ಸೆಕೆಯೂ ಇಳಿಯುತ್ತದೆ.

ಅಧಿಕ ನೀರು ಸೇವಿಸಿ

ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದಕ್ಕೆ ಅವಕಾಶವೇ ಕೊಡಬೇಡಿ. ಹೆಚ್ಚು ಬೆವರು ಬರುತ್ತೆ ಎಂದಾದರೆ, ಗ್ಲೂಕೋಸ್‌, ನಿಂಬೆ ಜ್ಯೂಸ್‌, ಒಆರ್‌ಎಸ್‌ ನಂತಹ ದ್ರಾವಣವನ್ನೂ ಸೇವಿಸಬಹುದು. ಇದು ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸುತ್ತದೆ. ಮಕ್ಕಳಿಗೂ ಅಧಿಕ ನೀರು ಸೇವಿಸಲು ತಿಳಿಸಿ.

ಬಿಸಿ ಅಧಿಕವಾದಂತೆ ದೇಹಕ್ಕೆ ತೆಗೆದುಕೊಳ್ಳುವ ಆಹಾರದಲ್ಲೂ ಎಚ್ಚರ ಅಗತ್ಯ. ಬಿಸಿಯಾಗಿರುವ ಕಾಫಿ, ಟೀ, ಮದ್ಯಪಾನಗಳನ್ನೂ ಸ್ವಲ್ಪ ಸಮಯ ಬಿಟ್ಟುಬಿಡುವುದು ಒಳಿತು. ಅಂತೆಯೇ ಹೆಚ್ಚು ಮಾಂಸಾಹಾರ ಒಳ್ಳೆಯದಲ್ಲ. ಹೆಚ್ಚು ಪ್ರೊಟೀನ್‌ ಇರುವ ಆಹಾರಗಳಿಂದ ದೂರವಿರಿ.

ಮನೆಯನ್ನು ಎಂದಿಗೂ ಸ್ವಚ್ಛವಾಗಿಟ್ಟುಕೊಳ್ಳಿ, ಬೆಡ್‌ ಶೀಟ್‌, ಹಾಸಿಗೆಯನ್ನು ಮಡಚಿಟ್ಟರೆ, ಮಲಗುವ ಸ್ವಲ್ಪ ಮೊದಲೇ ಬಿಡಿಸಿಟ್ಟುಕೊಳ್ಳಿ. ಮಲಗುವ ಕೋಣೆಯ ಫ್ಯಾನ್‌ ಆನ್‌ ಮಾಡಿ, ಬಾಗಿಲುಗಳನ್ನು ತೆರೆದಿಟ್ಟುಕೊಳ್ಳಿ. ಮನೆಯಲ್ಲಿ ಕೂಲರ್‌ ಇದ್ದಲ್ಲಿ, ಅದಕ್ಕೆ ಐಸ್‌ ಹಾಕಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...