alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋಟೋ ತೆಗೆದ ನಂತ್ರ ಆತ್ಮಹತ್ಯೆಗೆ ಶರಣಾದ ಛಾಯಾಗ್ರಾಹಕ

kevin-carter-vulture

ಕೆಲವೊಂದು ಘಟನೆಗಳನ್ನು ಮರೆಯಬೇಕೆಂದ್ರೂ ಮರೆಯೋದಕ್ಕೆ ಸಾಧ್ಯವಾಗುವುದಿಲ್ಲ. ಪದೇ ಪದೇ ಆ ಘಟನೆ ನೆನಪಾಗಿ ಮನಸ್ಸನ್ನು ಘಾಸಿಗೊಳಿಸುತ್ತದೆ. ಪ್ರಸಿದ್ಧ ಛಾಯಾಗ್ರಾಹಕ ಕೆವಿನ್ ಕಾರ್ಟರ್ ಜೀವನದಲ್ಲಿಯೂ ಹಾಗೆ ಆಗಿತ್ತು. ಅದೇ ಅವರ ಆತ್ಮಹತ್ಯೆಗೆ ಕಾರಣವಾಯ್ತು.

ದಕ್ಷಿಣ ಆಫ್ರಿಕಾದ ಈ ಪತ್ರಕರ್ತ 1993 ರಲ್ಲಿ ದಕ್ಷಿಣ ಸೂಡಾನ್ ಗೆ ಹೋಗಿ ಫೋಟೋ ತೆಗೆದಿದ್ದಾರೆ. ಆದ್ರೆ ಅಲ್ಲಿ ಕಂಡ ದೃಶ್ಯಗಳು ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುಃಖಿತರನ್ನಾಗಿ ಮಾಡಿತ್ತು. ಆ ಫೋಟೋ ತೆಗೆದ ಮೂರು ತಿಂಗಳ ನಂತ್ರ ಕೆವಿನ್ ಆತ್ಮಹತ್ಯೆ ಮಾಡಿಕೊಂಡ್ರು.

ಅವರು ತೆಗೆದ ಮೊದಲ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಕೂಡ ಬಂದಿದೆ. ಈ ಪ್ರಶಸ್ತಿ ಸಿಕ್ಕ ಮೂರು ತಿಂಗಳಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡರು. ದಕ್ಷಿಣ ಸೂಡಾನ್ ನಲ್ಲಿ ಹಸಿವಿನಿಂದ ಬಳಲುತ್ತಿದ್ದ ಮಗುವೊಂದರ ಫೋಟೋ ಅದಾಗಿದೆ. ಮಗು ಹಸಿವಿನಿಂದ ಸಾವಿನ ಕ್ಷಣ ಎಣಿಸ್ತಾ ಇದ್ದರೆ, ರಣಹದ್ದೊಂದು ಈ ಮಗುವನ್ನು ಹಿಂಬಾಲಿಸ್ತಾ ಇತ್ತು.

ಸುಮಾರು 20 ನಿಮಿಷಗಳ ಕಾಲ ರಣಹದ್ದು ಹಾರಿ ಹೋಗಬಹುದೆಂದು ಕೆವಿನ್ ಕಾದಿದ್ದರಂತೆ. ಆದ್ರೆ ಅದು ಹಾರಿ ಹೋಗದ ಕಾರಣ ಕೆವಿನ್ ಈ ಫೋಟೋ ತೆಗೆದ್ರಂತೆ. ಇದೊಂದೇ ಅಲ್ಲ ಇನ್ನಷ್ಟು ನೋವಿನ ಘಟನೆಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆದ್ರೆ ಕೆವಿನ್ ಗೆ ಆ ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪದೇ ಪದೇ ನೆನಪಾಗಿ ಅವರ ಮಾನಸಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...