alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಒತ್ತಡದಿಂದ ಬಳಲುತ್ತಿದ್ದೀರಾ…?

ಬದಲಾದ ಜೀವನ ಶೈಲಿ, ಕೆಲಸ-ಕಾರ್ಯಗಳು ಮೊದಲಾದ ಕಾರಣಗಳಿಂದ ಒತ್ತಡದಿಂದ ಬಳಲುತ್ತಿದ್ದೀರಾ? ಅದಕ್ಕೆ ಕಾರಣ ಅತಿಯಾದ ನಿರೀಕ್ಷೆಗಳು.

ಯಾವುದೇ ಕೆಲಸ ಮಾಡುವಾಗ ಒತ್ತಡವನ್ನು ಮಾಡಿಕೊಳ್ಳಬಾರದು. ಒತ್ತಡವಿದ್ದರೆ, ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಮೊದಲಿಗೆ ನಾವು ಮಾಡಲಿರುವ ಕೆಲಸ, ಕಾರ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇಷ್ಟು ಸಮಯದಲ್ಲಿ ಮುಗಿಸುವೆ ಎಂದು ಪ್ಲಾನ್ ಮಾಡಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿದೆ.

ಕೆಲವರು ಒತ್ತಡವಿದ್ದರೆ, ಯಾವುದೇ ಕೆಲಸ ಸುಲಭವಾಗುತ್ತದೆ ಎನ್ನುತ್ತಾರೆ. ಅದು ಸರಿ ಎನಿಸಿದರೂ, ಎಲ್ಲಾ ಕೆಲಸಗಳಿಗೂ ಅದು ಅನ್ವಯವಾಗುವುದಿಲ್ಲ. ಒತ್ತಡ ಮಾಡಿಕೊಂಡರೆ, ಕೆಲಸದ ಮೇಲೆ ಹಿಡಿತ ತಪ್ಪುವ ಸಾಧ್ಯತೆ ಇರುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಂಡು ಮಾಡುವ ಕೆಲಸಗಳು ಬೇಗನೆ ಮುಗಿಯುತ್ತವೆ.

ಅತಿಯಾದ ನಿರೀಕ್ಷೆಯಲ್ಲಿ ಯಾವ ಕಾರ್ಯವನ್ನು ಕೈಗೊಳ್ಳಬಾರದು. ಅತಿಯಾದ ನಿರೀಕ್ಷೆಗಳೇ ಕೆಲವೊಮ್ಮೆ ಕೆಲಸ, ಕಾರ್ಯಗಳು, ಗುರಿ ಸಾಧನೆಗೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಧಾವಂತ, ಅತಿಯಾದ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡಲ್ಲಿ ಯಶಸ್ಸಿನೆಡೆ ಸಾಗಬಹುದು ಎನ್ನುತ್ತಾರೆ ತಿಳಿದವರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...