alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ಸಾಹ, ಯಶಸ್ಸು ಗಳಿಸಲು ಹೀಗೆ ಮಾಡಿ

ಏಕತಾನತೆಯ ಬದುಕು, ಬೇಸರಕ್ಕೆ ಕಾರಣವಾಗುತ್ತದೆ. ಜೀವನದ ಜಂಜಾಟಗಳಿಂದ ಬೇಸರವಾದಲ್ಲಿ ಇವನ್ನು ಅನುಸರಿಸಿ. ಯಶಸ್ಸು –ಉತ್ಸಾಹವನ್ನು ಪಡೆಯಿರಿ.

ಪ್ರತಿದಿನ 10 -30 ನಿಮಿಷಗಳ ಕಾಲ ನಗುವಿನೊಂದಿಗೆ ವಾಕ್ ಮಾಡಿ, 10 ನಿಮಿಷಗಳ ಕಾಲ ಮೌನ, 6 ಗಂಟೆಗಳ ನಿದ್ದೆ ಮಾಡಿರಿ. ಪ್ರಾರ್ಥನೆ, ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಹತೋಟಿಯಲ್ಲಿರುತ್ತದೆ. ಇದರಿಂದ ಜಂಜಾಟವನ್ನು ಸುಲಭವಾಗಿ ಎದುರಿಸಲು ಸಹಾಯವಾಗುತ್ತದೆ.

ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಜೊತೆಯಾಗಿರಲಿ. ಎದುರಿಗೆ ಸಿಕ್ಕ ಪರಿಚಿತರೊಂದಿಗೆ ನಕ್ಕು ಮಾತನಾಡಿ. ಗಾಸಿಪ್ ಗಳಿಗೆ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲಿಗೆ, ಧನಾತ್ಮಕ ಚಿಂತನೆಗಳ ಬಗ್ಗೆ ಹೆಚ್ಚು ಗಮನವನ್ನು ಕೊಡಿ.

ದ್ವೇಷದಿಂದ ಏನನ್ನೂ ಸಾಧಿಸಲಾಗದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಾಧಿಸುವ ಛಲವನ್ನು ರೂಢಿಸಿಕೊಳ್ಳಿ.

ಯಾರ ಬಗ್ಗೆಯೂ ಕೀಳರಿಮೆ ಹೊಂದಬೇಡಿ. ಅವರ ಬಗ್ಗೆ ನಿಮಗೆ ತಿಳಿಯದಿರಬಹುದು. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳದೇ, ನಿಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ಬೇಕೆನಿಸಿದಾಗ ಬೇರೆಯವರಿಂದ ಸಲಹೆ ಸೂಚನೆಯನ್ನು ಪಡೆಯುವುದು ಉತ್ತಮ.

ಒಬ್ಬರ ಆಲೋಚನೆಗಳಿಗಿಂತ ಅನೇಕರ ಯೋಚನೆ, ಯೋಜನೆಗಳು ನಿಮಗೆ ಸಹಾಯಕ್ಕೆ ಬರುತ್ತವೆ. ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಎದೆಗುಂದದೇ ಎದುರಿಸಿ, ಸಾಧಿಸುವ ಛಲವೊಂದಿದ್ದರೆ, ಏನನ್ನಾದರೂ ಮಾಡಬಹುದೆಂದು ಬಲ್ಲವರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...