alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳೇ ಆವಿಷ್ಕರಿಸಿದ್ದಾರೆ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್

ಋತುಸ್ರಾವದ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಬಳಸುವುದಿಲ್ಲ. ಈ ನ್ಯಾಪ್ಕಿನ್ ಗಳಿಂದ ಟನ್ ಗಟ್ಟಲೆ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇವು ವಿಘಟನೆಯಾಗದ ತ್ಯಾಜ್ಯವಾಗಿರೋದ್ರಿಂದ ಪರಿಸರಕ್ಕೆ ಮಾರಕ. ಹಾಗಾಗಿ ಮುಟ್ಟಿನ ಮಾಲಿನ್ಯ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.

ಭಾರತದ 355 ಮಿಲಿಯನ್ ಮಹಿಳೆಯರಲ್ಲಿ ಕೇವಲ ಶೇ.12ರಷ್ಟು ಮಂದಿ ಮಾತ್ರ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಬಳಸುತ್ತಿದ್ದಾರೆ. ಉಳಿದವರು ಬಟ್ಟೆ, ಕಾಗದಗಳ ಮೊರೆಹೋಗ್ತಿದ್ದಾರೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಅಭಿಯಾನವೊಂದರ ಸಮೀಕ್ಷೆ ಪ್ರಕಾರ ಒಬ್ಬ ಮಹಿಳೆ ವರ್ಷಕ್ಕೆ 150 ಕೆಜಿ ಋತುಸ್ರಾವ ತ್ಯಾಜ್ಯವನ್ನು ಸೃಷ್ಟಿಸುತ್ತಾಳೆ.

ಕುಮಾರ್ ಗುರು ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ. ನಿವೇದಾ ಆರ್ ಹಾಗೂ ಗೌತಮ್ ಎಸ್ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತಯಾರಿಸಿದ್ದಾರೆ. ಇದಕ್ಕಾಗಿ ಅವರಿಗೆ ಛತ್ರ ವಿಶ್ವಕರ್ಮ ಅವಾರ್ಡ್ ಹಾಗೂ ಇಂಡಿಯಾ ಇನ್ನೋವೇಶನ್ ಇನಿಶಿಯೇಟಿವ್ ಪ್ರಶಸ್ತಿ ದೊರೆತಿದೆ.

ಭಾರತದ 12 ರಾಜ್ಯಗಳಲ್ಲಿ ಬೆಳೆಯುವ ಕೆನಾಫ್ ಫೈಬರ್ ಬಳಸಿ ಅವರು ಸ್ಯಾನಿಟರಿ ಪ್ಯಾಡ್ ತಯಾರಿಸಿದ್ದಾರೆ. ಗಿಡದಿಂದ ಬೇರ್ಪಡಿಸಿ ಅದರಿಂದ ಪ್ಯಾಡ್ ತಯಾರಿಸಲಾಗಿದೆ. ಈ ನ್ಯಾಪ್ಕಿನ್ ಗಳು ಜೈವಿಕ ವಿಘಟನೆ ಹೊಂದುತ್ತವೆ. ವಿವಿಧ ಪ್ರಶಸ್ತಿಗಳ ಜೊತೆಗೆ ವಿದ್ಯಾರ್ಥಿಗಳಿಗೆ 75,000 ರೂ. ನಗದು ಬಹುಮಾನವೂ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...