alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಗುಲದೊಳಗೆ ಕಾಲಿಟ್ರೆ ಶುರುವಾಗುತ್ತೆ ಭಯ…!

ಸಾಮಾನ್ಯವಾಗಿ ದೇವಸ್ಥಾನಕ್ಕೆ ಕಾಲಿಟ್ಟೊಡನೇ ಅವ್ಯಕ್ತ ನೆಮ್ಮದಿ ಮನಸ್ಸನ್ನ ಆವರಿಸಿಕೊಳ್ಳುತ್ತೆ. ಪ್ರಶಾಂತವಾದ ವಾತಾವಾರಣ ಬದುಕಿಗೆ ಹೊಸ ಚೈತನ್ಯವನ್ನ ಕೊಡುತ್ತೆ. ಆದ್ರೆ ಇವೆಲ್ಲದಕ್ಕೂ ತದ್ವಿರುದ್ಧ ನಾವಿಂದು ನಿಮಗೆ ಹೇಳೋಕೆ ಹೊರಟಿರೋ ದೇವಸ್ಥಾನ. ಹೌದು….ಈ ದೇಗುಲದೊಳಗೆ ಕಾಲಿಟ್ರೆ ಭಯ ಶುರುವಾಗುತ್ತೆ. ಮನಸ್ಸು ವಿಚಲಿತವಾಗಿ ವಿಲ ವಿಲ ಒದ್ದಾಡುತ್ತೆ ಇಂತದೊಂದು ದೇವಸ್ಥಾನ ರಾಜಸ್ಥಾನದ ದೌಸಾ ಜಿಲ್ಲೆಯ ಮೆಹಂದಿಪುರದಲ್ಲಿದೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ, ಪ್ರಸಾದ, ತೀರ್ಥ ಇವೆಲ್ಲವೂ ಪುಣ್ಯವನ್ನ ಕೊಡುವ, ಶ್ರದ್ಧಾ ಭಕ್ತಿಯಿಂದ ಭಕ್ತರು ಸೇವಿಸುವ ಪ್ರಸಾದಗಳು. ದೇಗುಲಕ್ಕೆ ಬಂದ ಯಾವ ಭಕ್ತರು ಪ್ರಸಾದವನ್ನ ಪಡೆಯದೇ ಹಿಂದಿರುಗಲ್ಲ. ಆದ್ರೆ ಈ ದೇವಸ್ಥಾನ ಇದಕ್ಕೆಲ್ಲಾ ಪಕ್ಕಾ ವಿರುದ್ಧ. ಹೌದು….ಪ್ರೇತ ಶಕ್ತಿಯಿಂದ ಮುಕ್ತಿ ಕೊಡೋ ಈ ದೇವಸ್ಥಾನಕ್ಕೆ ಬರೋರು ಒಂದು ಹನಿ ನೀರು ಮುಟ್ಟುವಂತಿಲ್ಲ.. ಇನ್ನೂ ಆಹಾರವಂತೂ ಬಿಲ್​ಕುಲ್​ ತಿನ್ನಂಗಿಲ್ಲ…!

ಇನ್ನೂ ಎಷ್ಟೇ ರಶ್​ ಇದ್ರೂ ಸಹಿತ ಈ ದೇಗುಲದೊಳಗೆ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ. ಅದು ಆಕಸ್ಮಿಕವಾಗಿಯೂ ಆಗಿರ್ಬಹುದು….ಉದ್ದೇಶಪೂರ್ವಕವಾಗಿಯೂ ಆಗಿರಬಹುದು. ಏನೇ ಆದ್ರೂ ಯಾವ ವ್ಯಕ್ತಿಯನ್ನೂ ಯಾರೂ ಮುಟ್ಟುವಂತಿಲ್ಲ.

ನಿಯಮ ಮೀರಿ ಮುಟ್ಟುವ ಸಾಹಸವನ್ನೂ ಯಾರೂ ಮಾಡಲ್ಲ. ಬಾಲಾಜಿ ದೇಗುಲದಿಂದ ಪ್ರಸಾದವಾಗ್ಲಿ, ಇನ್ಯಾವುದೇ ಆಹಾರ ಪದಾರ್ಥವನ್ನಾಗ್ಲಿ ವಾಪಸ್​ ಮನೆಗೆ ಹೋಗುವಾಗ ಕೊಂಡೊಯ್ಯುವಂತಿಲ್ಲ. ಏನೇ ಇದ್ರೂ ಅದೇ ಊರಲ್ಲಿ ಬಿಟ್ಟು ಹೋಗಬೇಕಾಗುತ್ತದೆ. ಬಾಟಲ್​ ನಲ್ಲಿ ನೀರಿದ್ರೆ ಅದನ್ನು ಚೆಲ್ಲಿ, ಆಹಾರವಿದ್ರೆ ಆ ಪೊಟ್ಟಣವನ್ನ ಅಲ್ಲೇ ಬಿಸಾಕಿ ಮೆಹಂದಿಪುರ್​ ನಿಂದ ಭಕ್ತರು ಹೊರಬೀಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...