alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಯಲ್ಲಿ ಹತ್ಯೆಯಾದ ಯುವತಿಯ ಕರುಣಾಜನಕ ಕಥೆ

gun-shot

24 ವರ್ಷದ ಕುಲ್ವಿಂದರ್, ಮನೆಯವರು ಪ್ರೀತಿಯಿಂದ ಅವಳನ್ನು ಜಾನು ಅಂತಾನೇ ಕರೆಯುತ್ತಿದ್ರು. ಮದುವೆ ಸಮಾರಂಭಕ್ಕೆ ಗ್ಲಾಮರ್ ಟಚ್ ಕೊಡುತ್ತ ಮನೆಯ ಜವಾಬ್ಧಾರಿಗಳನ್ನೆಲ್ಲ ಆಕೆ ನಿಭಾಯಿಸ್ತಾ ಇದ್ಲು. ತಂದೆ- ತಾಯಿ ಜೊತೆಗೆ ಅಣ್ಣನ ಮೂವರು ಮಕ್ಕಳ ಹೊಣೆ ಅವಳ ಮೇಲಿತ್ತು. ಕುಲ್ವಿಂದರ್ ತಂದೆ ಬಲದೇವ್ ಸಿಂಗ್ ರದ್ದು ಕಾರ್ಮಿಕ ವೃತ್ತಿ. ಅಣ್ಣ ತೀರಿಕೊಂಡಿದ್ರಿಂದ ಅವನ ಮೂರು ಮಕ್ಕಳನ್ನೂ ಕುಲ್ವಿಂದರ್ ಸಾಕುತ್ತಿದ್ಲು.

ಭತಿಂಡಾದಲ್ಲಿ 100 ಕ್ಕೂ ಹೆಚ್ಚು ಆರ್ಕೆಸ್ಟ್ರಾ ಗ್ರೂಪ್ ಗಳಿವೆ. ಕುಲ್ವಿಂದರ್ ಕೂಡ ಅವುಗಳಲ್ಲೊಂದರ ಸದಸ್ಯೆ. ಮದುವೆ ಮನೆಗಳಲ್ಲಿ ಗನ್ ಗಳ ಅಬ್ಬರ, ಗುಂಡಿನ ಮೊರೆತದ ನಡುವೆ ನರ್ತಿಸುತ್ತ ಕುಟುಂಬ ನಿರ್ವಹಣೆಗಾಗಿ ಹಣ ಸಂಪಾದಿಸುತ್ತಿದ್ಲು. ಕೆಲವೊಮ್ಮೆ ಬೆಳಗ್ಗೆ 4 ಗಂಟೆವರೆಗೂ ಡ್ಯಾನ್ಸ್ ಮಾಡಬೇಕಾಗುತ್ತಿತ್ತು, ಸಿಗ್ತಾ ಇದ್ದಿದ್ದು 2500-5000 ರೂಪಾಯಿ.

ಮೌರ್ ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನೃತ್ಯ ಮಾಡ್ತಾ ಇದ್ದ ಕುಲ್ವಿಂದರ್ ಗುಂಡು ತಗುಲಿ ಸಾವನ್ನಪ್ಪಿದ್ಲು. ಮಗಳ ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿದೆ. ಭತಿಂಡಾದಲ್ಲಿ 24,000 ಜನರ ಬಳಿ ಗನ್ ಲೈಸನ್ಸ್ ಇದೆ. ಶ್ರೀಮಂತರು ಮದುವೆ ಸಮಾರಂಭಗಳಲ್ಲಿ ಬಂದೂಕನ್ನು ಆಟಿಕೆಯಂತೆ ಬಳಸ್ತಾರೆ. ಹೊಟ್ಟೆಪಾಡಿಗಾಗಿ ನರ್ತಿಸುವವರತ್ತ ಗುಂಡು ಹಾರಿಸುತ್ತ ಮಜಾ ತೆಗೆದುಕೊಳ್ತಾರೆ. ಶ್ರೀಮಂತರ ಈ ತಮಾಷೆಯೇ ಕುಲ್ವಿಂದರ್ ಪ್ರಾಣವನ್ನು ಬಲಿ ಪಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...