alex Certify ಒತ್ತಡ ಕಡಿಮೆ ಮಾಡಲು ಬೆಸ್ಟ್ ಸಾಲ್ಟ್ ವಾಟರ್ ಬಾತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ ಕಡಿಮೆ ಮಾಡಲು ಬೆಸ್ಟ್ ಸಾಲ್ಟ್ ವಾಟರ್ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.‌

ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ. ಇದನ್ನು ಸಾಲ್ಟ್ ವಾಟರ್ ಬಾತ್ ಎಂದೂ ಕರೆಯುತ್ತಾರೆ.

ಸೋಂಕು : ಬೇಸಿಗೆ ಸಮಯದಲ್ಲಿ ಬೆವರಿನಿಂದಾಗಿ ಶರೀರದಲ್ಲಿ ತುರಿಕೆ ಹಾಗೂ ಸೋಂಕು ಕಾಣಿಸಿಕೊಳ್ಳುತ್ತದೆ. ಇದ್ರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪ್ರತಿದಿನ ಸ್ನಾನ ಮಾಡುವ ನೀರಿಗೆ ಚಿಟಕಿ ಉಪ್ಪು ಬೆರೆಸಿ ಸ್ನಾನ ಮಾಡಿ.

ಸ್ನಾಯುಗಳ ನೋವು : ಸ್ನಾಯುಗಳು ದುರ್ಬಲವಾಗಿದ್ದರೆ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಾಲ್ಟ್ ವಾಟರ್ ಬಾತ್ ಹೇಳಿ ಮಾಡಿಸಿದ ಔಷಧಿ. ಇದ್ರಿಂದ ಕೀಲು ನೋವು ಗುಣಮುಖವಾಗಿ ನೆಮ್ಮದಿ ಸಿಗುತ್ತದೆ.

ಕೀಟಗಳ ಅಲರ್ಜಿ : ಸೊಳ್ಳೆ ಸೇರಿದಂತೆ ವಿಷಕಾರಿ ಕೀಟಗಳು ಕಚ್ಚಿದಾಗ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ಚರ್ಮದ ಮೇಲೆ ಕಲೆ ಉಳಿದುಬಿಡುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಉಪ್ಪು ಮಿಶ್ರಿತ ನೀರು ಒಳ್ಳೆಯದು.

ಮಾನಸಿಕ ಒತ್ತಡ : ದಿನವಿಡಿ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರು ರಾತ್ರಿ ಮಲಗುವ ಮೊದಲು ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಮಾನಸಿಕ ಒತ್ತಡ ಕಡಿಮೆಯಾಗಿ ಸುಖ ನಿದ್ರೆ ನಿಮ್ಮದಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...