alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ- ಪತ್ನಿಗೆ ಈ ದೇವಿ ದರ್ಶನ ನಿಷಿದ್ಧ

temple-1

ಪತಿ- ಪತ್ನಿ ಒಂದಾಗಿ ದೇವರ ಪೂಜೆ ಮಾಡಿದ್ರೆ ಪುಣ್ಯ ದುಪ್ಪಟ್ಟಾಗುತ್ತೆ ಎಂಬ ನಂಬಿಕೆ ನಮ್ಮಲ್ಲಿದೆ. ಹಿಂದೂ ಧರ್ಮದ ಪ್ರಕಾರ ದೇವಸ್ಥಾನದಲ್ಲಿ ಪತಿ- ಪತ್ನಿ ಒಂದಾಗಿ ಪೂಜೆ ಮಾಡಬೇಕೆಂಬ ನಂಬಿಕೆ ಇದೆ. ದೇವಸ್ಥಾನಕ್ಕೆ ಸಾಮಾನ್ಯವಾಗಿ ದಂಪತಿ ಒಟ್ಟಿಗೆ ಹೋಗ್ತಾರೆ. ಆದ್ರೆ ಎಲ್ಲ ದೇವರಂತಲ್ಲ ಈ ದೇವಿ. ಆ ದೇವಿಯ ದರ್ಶನಕ್ಕೆ ಪತಿ- ಪತ್ನಿ ಒಟ್ಟಿಗೆ ಹೋದ್ರೆ ಆಪತ್ತು ಗ್ಯಾರಂಟಿ.

ಆಶ್ಚರ್ಯವಾದ್ರೂ ಇದು ನಿಜ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ಇರುವ ರಾಂಪುರ್ ನ ಕೋಟಿ ಮಾತೆಯನ್ನು ದಂಪತಿ ಒಟ್ಟಿಗೆ ದರ್ಶನ ಮಾಡುವಂತಿಲ್ಲ. ಈ ದೇವಸ್ಥಾನಕ್ಕೆ ದಂಪತಿ ಒಟ್ಟಿಗೆ ಬರ್ತಾರೆ. ಆದ್ರೆ ಒಂದಾಗಿ ದೇವಿಯ ದರ್ಶನ ಮಾಡುವುದಿಲ್ಲ. ಒಬ್ಬರು ಒಂದು ಸಮಯದಲ್ಲಿ ದರ್ಶನ ಮಾಡಿದ್ರೆ ಮತ್ತೊಬ್ಬರು ಮತ್ತೊಂದು ಸಮಯದಲ್ಲಿ ದರ್ಶನ ಮಾಡುತ್ತಾರೆ.

ಇಷ್ಟಾಗಿಯೂ ದಂಪತಿ ದೇವಿಯ ದರ್ಶನವನ್ನು ಒಟ್ಟಿಗೆ ಮಾಡಿದ್ರೆ ಕಷ್ಟ ಎದುರಿಸಬೇಕಾಗುತ್ತದೆ. ಒಟ್ಟಿಗೆ ದರ್ಶನ ಮಾಡಿದ ದಂಪತಿ ಬೇರೆಯಾಗ್ತಾರೆ. ಪಾರ್ವತಿ ಪುತ್ರ ಕಾರ್ತಿಕೇಯ ವಿವಾಹವಾಗಲು ನಿರಾಕರಿಸಿದ ನಂತ್ರ ಬೇಸರಗೊಂಡ ಪಾರ್ವತಿ, ಇಲ್ಲಿ ತನ್ನ ದರ್ಶನವನ್ನು ಪತಿ- ಪತ್ನಿ ಒಟ್ಟಿಗೆ ಮಾಡಿದ್ರೆ ಬೇರೆಯಾಗ್ತಾರೆಂದು ನುಡಿದಿದ್ದಳಂತೆ. ಅಲ್ಲಿಂದ ಈವರೆಗೂ ಈ ದೇವಸ್ಥಾನದಲ್ಲಿ ದಂಪತಿ ಒಟ್ಟಿಗೆ ದರ್ಶನ ಮಾಡುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...