alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲೆಗಿದ್ಯಂತೆ ಮಳೆ ಬರಿಸುವ ಶಕ್ತಿ…!

africa-rainmaker-queen-afp_650x400_51497179896

ಇವಳು 12 ವರ್ಷದ ವಿದ್ಯಾರ್ಥಿನಿ, ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಅನ್ನೋ ಆಸೆ ಇಟ್ಕೊಂಡಿದ್ದಾಳೆ. ಮಸಾಲನಾಬೋ ಮೊಡ್ಜಾದ್ಜಿ ಎಂಬ ಈ ಬಾಲಕಿ ಸಾಮಾನ್ಯಳಲ್ಲ. ಆಫ್ರಿಕಾದ ರಾಣಿ, ಇವಳಿಗೆ ಮಳೆಬರಿಸುವ ಅಸಾಮಾನ್ಯ ಶಕ್ತಿ ಇದೆಯಂತೆ.

ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರದೇಶದಲ್ಲಿರುವ ಬಲೊಬೆಡು ಎಂಬಲ್ಲಿ ಈ ಬಾಲಕಿಯದ್ದೇ ರಾಜ್ಯಭಾರ. 18 ವರ್ಷ ತುಂಬುತ್ತಿದ್ದಂತೆ ಇವಳಿಗೆ ರಾಜ್ಯಾಭಿಷೇಕ ಮಾಡಿ, ರಾಣಿಯ ಪಟ್ಟ ಕಟ್ಟಲಾಗುತ್ತದೆ. 2005ರಲ್ಲಿ ಮಸಾಲನಾಬೋ ಜನಿಸುತ್ತಿದ್ದಂತೆಯೇ ಅವಳನ್ನು ರಾಣಿ ಅಂತಾ ಘೋಷಣೆ ಮಾಡಲಾಗಿದೆ.

ಮಸಾಲನಾಬೋ ವರುಣ ದೇವನ ಪ್ರತಿನಿಧಿ ಅನ್ನೋದು ಈ ಭಾಗದ ಜನರ ನಂಬಿಕೆ. ಆದ್ರೆ ಇಲ್ಲಿ ಎಲ್ಲರೂ ಅನಕ್ಷರಸ್ಥರೇನಲ್ಲ, ಈ ಬಾಲಕಿಯ ತಾಯಿ ಕೂಡ ರಾಜವಶಂಸ್ಥೆ, ರಾಣಿಯಾಗಿದ್ದವಳು. ಈ ಭಾಗದಲ್ಲಿ ಓದು-ಬರಹ ಕಲಿತಿದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಳು.

ಈ ಬಾಲಕಿ ಕೂಡ ಶಿಕ್ಷಣದ ಬಗ್ಗೆ ಅಪಾರ ಒಲವು ಹೊಂದಿದ್ದಾಳೆ. ಬಿಡುವಿದ್ದಾಗಲೆಲ್ಲ ದಕ್ಷಿಣ ಆಫ್ರಿಕಾದ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತಾಳೆ, ಸಲಹೆ ಪಡೆಯುತ್ತಾಳೆ. ಮಳೆಗಾಲದಲ್ಲಿ ರಾಣಿಯಿಂದ್ಲೇ ಮಳೆಬರಿಸುವ ಪ್ರಾರ್ಥನೆ ಮಾಡಿಸುವುದು ಇಲ್ಲಿನ ಸಂಪ್ರದಾಯ. ಆ ಪ್ರಾರ್ಥನೆ ಸಲ್ಲಿಕೆಯಾದ ಬಳಿಕವೇ ಇಲ್ಲಿ ಮೊದಲ ಮಳೆಯಾಗುತ್ತೆ ಅನ್ನೋ ನಂಬಿಕೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...