alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಕೃಷಿಕನ ಹೆಮ್ಮೆಯ ಪುತ್ರನೀಗ ವಾಯುಸೇನೆಯ ಪೈಲಟ್

pilot

ಮಕ್ಕಳು ತಮ್ಮ ಕಾಲಿನ ಮೇಲೆ ತಾವು ನಿಂತರೆ ಹೆತ್ತವರಿಗೆ ಹೆಮ್ಮೆ. ಶಮ್ಷೇರ್ ಸಿಂಗ್ ಬಗ್ವಾನ್ ಅವರಂತೂ ಇಂತಹ ಮಗನನ್ನು ಪಡೆದ ತಾವು ಅದೃಷ್ಟಶಾಲಿ ಎನ್ನುತ್ತಾರೆ. ಯಾಕಂದ್ರೆ ಶಮ್ಷೇರ್ ಸಿಂಗ್ ಕೃಷಿಕರು, ಬಡ ರೈತನ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರ ಮಗ ದಿಗ್ವಿಜಯ್ ಸಿಂಗ್ ಕುಟುಂಬದಲ್ಲಿ ಯಾರೂ ಮಾಡದಂತಹ ಸಾಧನೆ ಮಾಡಿದ್ದಾರೆ. ಭಾರತೀಯ ವಾಯುಸೇನೆಯ ಪೈಲಟ್ ಆಗಿರೋ 23 ವರ್ಷದ ದಿಗ್ವಿಜಯ್ ಸಿಂಗ್ ಸಾಧನೆ ಮುಗಿಲೆತ್ತರಕ್ಕೆ ಸಾಗಿದೆ.

ಡಿಸೆಂಬರ್ 17 ರಂದು ಹೈದ್ರಾಬಾದ್ ನಲ್ಲಿ ನಡೆದ ಪರೇಡ್ ನಲ್ಲಿ ಉತ್ತೀರ್ಣರಾದ ದಿಗ್ವಿಜಯ್ ಸಿಂಗ್, ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿದ್ದಾರೆ. ಬಡ ಕುಟುಂಬದವರಾಗಿದ್ರೂ ಪೈಲಟ್ ಆಗಬೇಕೆಂಬ ತಮ್ಮ ಆಸೆಯನ್ನು ದಿಗ್ವಿಜಯ್ ಎಂದೂ ಬಿಟ್ಟಿರಲಿಲ್ಲ. ಕುಟುಂಬದವರು, ಹೆತ್ತವರು ಜೊತೆಗಿದ್ದರೆ ಯಾವುದೂ ಅಸಾಧ್ಯವಲ್ಲ ಅನ್ನೋದು ಅವರಿಗೆ ಗೊತ್ತಿತ್ತು. ತಂದೆ ಹಾಗೂ ಸೋದರಮಾವನ ಸಹಕಾರ ಮತ್ತು ಪ್ರೋತ್ಸಾಹದಿಂದ ದಿಗ್ವಿಜಯ್ ಸಿಂಗ್ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...