alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಮುಂದಾಗಿದ್ದ ಗರ್ಭಿಣಿಗೆ ಸಿಕ್ತು ಹೊಸ ಬದುಕು

pregnant

ಮದುವೆಗೂ ಮುನ್ನ ಯುವತಿ ಗರ್ಭಿಣಿಯಾದ್ರೆ ಸಮಾಜದಿಂದ ತಿರಸ್ಕಾರ ಎದುರಿಸಬೇಕಾಗುತ್ತದೆ. ಆಕೆಯ ಕುಟುಂಬದವರು ಕೂಡ ಅವಮಾನ ಎದುರಿಸಬೇಕಾಗುತ್ತದೆ.

ಅಂತಹ ಸಂದರ್ಭಗಳಲ್ಲಿ ಎಷ್ಟೋ ಯುವತಿಯರು ದುಡುಕಿನ ನಿರ್ಧಾರ ಕೈಗೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ. ದೆಹಲಿಯ 20 ವರ್ಷದ ಯುವತಿ ಕೂಡ ಮದುವೆಗೂ ಮೊದಲೇ ಗರ್ಭ ಧರಿಸಿದ್ಲು, ಸಮಾಜಕ್ಕೆ ಹೆದರಿ ಬದುಕನ್ನೇ ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ಲು.

ಒಂಟಿಯಾಗಿ ಬದುಕಿನಲ್ಲಿ ಭರವಸೆ ಕಳೆದುಕೊಂಡಿದ್ದ ಯುವತಿ ತನ್ನ ನೋವನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ಲು. ಜೋವನ್ನಿ ವರೇಲಾ ಎಂಬುವವರ ಪೇಜ್ ನಲ್ಲಿ ತನ್ನ ಅಳಲು ತೋಡಿಕೊಂಡಿದ್ಲು. ‘ನನಗಿನ್ನೂ 20 ವರ್ಷ, ನಾನೀಗ ಗರ್ಭಿಣಿ, ಇದಕ್ಕೆ ಕಾರಣನಾದವನು ನನ್ನ ಬಾಯ್ ಫ್ರೆಂಡ್ ಕೂಡ ಅಲ್ಲ. ನನ್ನ ಕುಟುಂಬಕ್ಕಾಗುವ ಅವಮಾನ ತಪ್ಪಿಸಲು ಇವತ್ತು ರಾತ್ರಿ ಸಾಯಬೇಕೆಂದು ನಿರ್ಧರಿಸಿದ್ದೇನೆ’ ಅಂತಾ ಬರೆದಿದ್ಲು.

ಈ ಪೋಸ್ಟನ್ನು ಜೋವನ್ನಿ ಸ್ನಾಪ್ ಚಾಟ್ ನಲ್ಲಿ ಶೇರ್ ಮಾಡಿದ್ರು. ಇದಕ್ಕೆ ಜಗತ್ತಿನ ಮೂಲೆ ಮೂಲೆಯಿಂದ್ಲೂ ಪ್ರತಿಕ್ರಿಯೆಗಳು ಬಂದಿವೆ, ಪ್ರತಿಯೊಬ್ಬರೂ ಯುವತಿಯನ್ನು ಬೆಂಬಲಿಸಿದ್ದು, ಸಾಯುವ ನಿರ್ಧಾರ ಕೈಬಿಡುವಂತೆ ಮನವಿ ಮಾಡಿದ್ದಾರೆ. ಜನರಿಂದ ಸಿಕ್ಕಿದ ಸಪೋರ್ಟ್ ನಿಂದಾಗಿ ಮನಸ್ಸು ಬದಲಾಯಿಸಿದ ಯುವತಿ ಸಾಯುವ ತೀರ್ಮಾನವನ್ನು ಕೈಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...