alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಶಿವನ ಜೊತೆಗೆ ಸರ್ಪಕ್ಕೂ ನಡೆಯುತ್ತೆ ಅಭಿಷೇಕ !

l_snake-on-shivling-shivling-578e020a5085f_lಜಯಪುರದ ಬಾಲಾಜಿ ಸಿದ್ಧಪೀಠ ಆಶ್ರಮದಲ್ಲಿರುವ ಪ್ರಾಚೀನ ಶಿವ ಮಂದಿರದಲ್ಲಿ ಶಿವನ ಜೊತೆಗೆ ಹಾವಿಗೂ ಅಭಿಷೇಕ ನಡೆಯುತ್ತದೆ. ಈ ಕಾರಣದಿಂದಲೇ ಈ ಈಶ್ವರ ದೇವಸ್ಥಾನ ದಿನೇ ದಿನೇ ಖ್ಯಾತಿ ಪಡೆಯುತ್ತಿದೆ.

ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಈ ಹಾವು ಶಿವಲಿಂಗದ ಬಳಿ ಬಂದು ಭಕ್ತರಿಗೆ ದರ್ಶನ ಕೊಡುತ್ತದಂತೆ. ಈ ಬಾರಿ ಕೂಡ ಹಾಗೆಯೇ ಆಗಿದೆ. ಜುಲೈ 19 ರ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಂದ ಈ ಸರ್ಪ, ಭಕ್ತರಿಗೆ ದರ್ಶನ ನೀಡಿ ಅಭಿಷೇಕ ಮಾಡಿಸಿಕೊಂಡಿದೆ. ಹೀಗೆ ಶಿವನ ಸುತ್ತ ಸುಳಿವ ಹಾವು ಇದುವರೆಗೂ ಯಾರನ್ನೂ ಕಚ್ಚಿಲ್ಲ.

ತುಂಬ ಸಮಯದವರೆಗೆ ಶಿವಲಿಂಗದ ಬಳಿಯಲ್ಲೇ ಕುಳಿತ ನಾಗರ, ನಂತರದಲ್ಲಿ ಕಾಡಿನತ್ತ ಪಯಣ ಬೆಳೆಸಿದೆ. ಈ ಮಂದಿರ ಸಮಿತಿಯ ಗೀತ ಜ್ಞಾನ ಪ್ರಸಾದ ಟ್ರಸ್ಟ್ ನ ಅಧ್ಯಕ್ಷ ಯೋಗರಾಜ್ ಹರಪಾಲ್ ಸಿಂಗ್ ಅವರು, “ಈ ಸರ್ಪ ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿ ಬರುತ್ತದೆ” ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...