alex Certify
ಕನ್ನಡ ದುನಿಯಾ       Mobile App
       

Kannada Duniya

ವಾಣಿಜ್ಯನಗರಿಯಲ್ಲಿ ಹಾವುಗಳ ರಕ್ಷಣೆಗಿಳಿದ ಸಾಹಸಿ ಮಹಿಳೆಯರು

snake

40 ವರ್ಷ ವಯಸ್ಸಿನ ವೈಶಾಲಿ ಠಾಕೂರ್ ಹಾವು ಹಿಡಿಯೋದ್ರಲ್ಲಿ ಎಕ್ಸ್ ಪರ್ಟ್. 5 ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿ ಮಗಳ ಸ್ಕೂಲ್ ನಲ್ಲಿ ವೈಶಾಲಿ ಹಾವು ಹಿಡಿಯೋದನ್ನು ಪ್ರತ್ಯಕ್ಷವಾಗಿ ಕಂಡಿದ್ಲು. ಅಲ್ಲಿ ಹಾವು ಹಿಡಿಯಲು ಬಂದಿದ್ದವನೊಬ್ಬ ಮಹಿಳೆ ಎಂಬ ಕಾರಣಕ್ಕೆ ವೈಶಾಲಿ ಬಗ್ಗೆ ವ್ಯಂಗ್ಯವಾಡಿದ್ದ.

ಹಾವು ಹಿಡಿಯೋದು ಹಾಗಿರಲಿ, ಜಿರಳೆ ಕಂಡ್ರೂ ಹೆಂಗಸರು ಪ್ರಾಣ ಹೋದಂತೆ ಕಿರುಚಿಕೊಳ್ತಾರೆ ಎಂದಿದ್ದ. ಅದರಿಂದ ಬೇಸರ ಮಾಡಿಕೊಳ್ಳದ ವೈಶಾಲಿ ಅವನಿಂದ್ಲೇ ಈ ಕಲೆಯನ್ನು ಕಲಿತಿದ್ದಾರೆ. ಅದಾದ ಮೇಲೆ ಮನೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ಅದೆಷ್ಟೋ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಕೇವಲ ವೈಶಾಲಿ ಮಾತ್ರವಲ್ಲ ಮಾನ್ಸಿ ನಾಥ್ವಾನಿ ಕೂಡ ಹಾವು ಹಿಡಿಯೋದ್ರಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಮಳೆಗಾಲದಲ್ಲಿ ಮಾನ್ಸಿ ಒಂದೇ ಮನೆಯಲ್ಲಿದ್ದ 5 ಹೆಬ್ಬಾವುಗಳನ್ನು ರಕ್ಷಣೆ ಮಾಡಿದ್ದಾರೆ. ಎಷ್ಟೇ ವಿಷಕಾರಿ ಸರ್ಪವಾದ್ರೂ ಚಾಣಾಕ್ಷತೆಯಿಂದ ಅದನ್ನು ಹಿಡಿಯುತ್ತಾರೆ. ಹಾವು ಹಿಡಿಯುವ ಈ ಸಾಹಸಿ ಮಹಿಳೆಯರು ಮುಂಬೈನಲ್ಲಿ ಮನೆಮಾತಾಗಿದ್ದಾರೆ. ಎಲ್ಲೇ ಕಾರ್ಯಾಚರಣೆಗೆ ತೆರಳಿದ್ರೂ ಸುತ್ತಮುತ್ತಲ ಜನರೆಲ್ಲ ಅದನ್ನು ವೀಕ್ಷಿಸಲು ಮುಗಿಬೀಳ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...