alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಖರೀದಿದಾರರಿಗೊಂದು ಗುಡ್ ನ್ಯೂಸ್

dea72c0bdbe751e6a66a1bd1b4b13df33a871674

ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವಂತೆಯೇ ವಿವಿಧ ಕಂಪನಿಗಳ ಆಕರ್ಷಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡತೊಡಗಿವೆ. ಎರಡು ದಿನಗಳ ಹಿಂದಷ್ಟೇ ಚೀನಾದ ಕಂಪನಿಯೊಂದು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಫೋನ್ ಬಿಡುಗಡೆಯಾಗಿದೆ.

ಚೀನಾದ ಮೊಬೈಲ್ ತಯಾರಿಕಾ ಕಂಪನಿ ಒಪ್ಪೊ ಎಫ್ ಒನ್ ಹಾಗೂ ಎಫ್ ಒನ್ -ಪ್ಲಸ್ ಸ್ಮಾರ್ಟ್ ಫೋನ್ ರಿಲೀಸ್ ಮಾಡಿತ್ತು. ಅತ್ಯಾಧುನಿಕ ಸೌಲಭ್ಯ, ಅಪ್ಲಿಕೇಷನ್ಸ್ ಹೊಂದಿರುವ ನವೀನ ತಂತ್ರಜ್ಞಾನದ ಸ್ಮಾರ್ಟ್ ಫೋನ್ ಗಳು ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ. ಗ್ರಾಹಕರ ಅನುಕೂಲತೆ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಬಹು ನಿರೀಕ್ಷಿತ ‘ಲಿ1 ಎಸ್’ ಸ್ಮಾರ್ಟ್ ಫೋನ್ ಅನ್ನು ಚೀನಾದ ಖ್ಯಾತ ಕಂಪನಿ ಲಿ ಇಕೋ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

13 ಎಂಪಿ ಬ್ಯಾಕ್ ಕ್ಯಾಮೆರಾ ಹಾಗೂ ಅತ್ಯಾಕರ್ಷಕ ಲೋಹದ ಬಾಡಿ ಹೊಂದಿರುವ ‘ಲಿ1 ಎಸ್’ ಫೋನ್ ನಲ್ಲಿ ಆಟೋ ಫೋಕಸ್ ಮತ್ತು ಎಲ್ಇಡಿ ಫ್ಲ್ಯಾಷ್ ಕೂಡ ಇದೆ. ಅಲ್ಲದೇ, 5ಎಂಪಿ ಫ್ರಂಟ್ ಕ್ಯಾಮೆರಾ ಕೂಡ ಇದ್ದು, ಸೆಲ್ಫಿ ಮತ್ತು ವೀಡಿಯೋ ಕಾಲಿಂಗ್ ಗೆ ಅನುಕೂಲಕರವಾಗಿದೆ. 32 ಜಿಬಿ ಇಂಟರ್ನಲ್ ಸ್ಟೋರೇಜ್ ಸೇರಿದಂತೆ ಹಲವು ಸೌಲಭ್ಯಗಳಿರುವ ಇದು ಐಫೋನ್ ಹೋಲುವಂತಿದ್ದು, ಬೆಲೆ 10,999 ರೂ. ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...