alex Certify ʼಸ್ಲೀವ್ ಲೆಸ್ʼ ಡ್ರೆಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಲೀವ್ ಲೆಸ್ʼ ಡ್ರೆಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು ಹೇಗೆ…..?

ಸ್ಲೀವ್ ಲೆಸ್ ಔಟ್ ಫಿಟ್ ಧರಿಸುವುದು ಹೆಚ್ಚಿನ ಜನರಿಗೆ ಇಷ್ಟ. ಮತ್ತೆ ಕೆಲವರ ವಾರ್ಡ್ ರೋಬ್‌ನಲ್ಲಿ ಇಂಥ ಡ್ರೆಸ್ ಇರೋದೇ ಇಲ್ಲ. ಯಾಕೆಂದರೆ ಟ್ಯಾನಿಂಗ್ ಅಥವಾ ಕೈಗಳು ಹೆಚ್ಚು ದಪ್ಪ ಕಾಣುತ್ತದೆ ಎಂದು ಮಹಿಳೆಯರು ಸ್ಲೀವ್‌ಲೆಸ್ ಧರಿಸಲು ಇಷ್ಟ ಪಡೋದಿಲ್ಲ.

ಕ್ರೀಮ್ ಬಳಸಿ ಟ್ಯಾನ್ ಸಮಸ್ಯೆ ನಿವಾರಿಸಬಹುದು. ಆದರೆ ಕೈ ದಪ್ಪ ಕಾಣಿಸುತ್ತದೆ ಮತ್ತು ಅಸಹ್ಯ ಎನಿಸುತ್ತಿದ್ದರೆ ಈ ಟಿಪ್ಸ್ ಸ್ಟೈಲಿಶ್ ಲುಕ್ ನೀಡುತ್ತದೆ.

* ಸ್ಲೀವ್‌ಲೆಸ್ ಡ್ರೆಸ್ ಧರಿಸುವ ಮುನ್ನ ಅದರ ನೆಕ್ ವಿ ಆಕಾರದಲ್ಲಿದೆಯೇ ನೋಡಿಕೊಳ್ಳಿ. ಯಾಕೆಂದರೆ ವಿ ನೆಕ್ ಧರಿಸಿದರೆ ಜನರ ಕಣ್ಣು ಕಾಲರ್ ಬೊನ್ ಮೇಲಿರುತ್ತೆ. ತೋಳುಗಳ ಮೇಲೆ ಹೆಚ್ಚಾಗಿ ಹೋಗೋದಿಲ್ಲ.

* ಚೈನೀಸ್ ಕಾಲರ್ ಇರುವ ಓಪನ್ ಶರ್ಟ್ ಕೂಡ ಧರಿಸಬಹುದು. ಇದರಿಂದ ಇಲ್ಯೂಷನ್ ಉಂಟಾಗಿ ತೋಳು ಹೆಚ್ಚು ದಪ್ಪ ಕಾಣಿಸೋದಿಲ್ಲ.

* ತೋಳುಗಳು ಸಣ್ಣದಾಗಿ ಕಾಣಲು ಸ್ಲೀವ್ ಲೆಸ್ ಖರೀದಿಸುವಾಗ ರೌಂಡ್ ಮತ್ತು ಕಾಲರ್ ಬಂದ್ ಆಗಿರುವ ಟಾಪ್, ಶರ್ಟ್, ಒನ್ ಪೀಸ್, ಕುರ್ತಾ ಮತ್ತು ಗೌನ್ ಅವಾಯ್ಡ್ ಮಾಡಿ. ವಿ, ಹೈ ಅಥವಾ ಹಾಲ್ಟಾರ್ ನೆಕ್ ಆಯ್ಕೆ ಮಾಡಿ.

* ಸ್ಲೀವ್ ಲೆಸ್ ಜೊತೆ ಲೂಸ್ ಬ್ರೇಸ್ ಲೆಟ್, ವಾಚ್ ಮತ್ತು ಬಳೆ ಹಾಕಿದರೆ ಸಣ್ಣ ಕಾಣಿಸುತ್ತೀರಿ.

* ಸ್ಲೀವ್ ಲೆಸ್ ಡ್ರೆಸ್ ಜೊತೆಗೆ ಹೆವಿ ಪ್ರಿಂಟ್ ಹೊಂದಿರುವ ಬಾಟಮ್ ಧರಿಸಿ. ಇದರಿಂದ ಬಾಟಮ್ ಕಡೆಗೆ ಹೆಚ್ಚು ಫೋಕಸ್ ಆಗುತ್ತದೆ.

* ವರ್ಟಿಕಲ್ ಸ್ಟ್ರೈಪ್ ಹೊಂದಿರುವ ಸ್ಲೀವ್ ಲೆಸ್ ಟಾಪ್ ಧರಿಸಿದರೆ ಹೆವಿ ಆರ್ಮ್ ಕೂಡ ಸಣ್ಣದಾಗಿ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...