alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಂಧವನ್ನು ಸ್ರವಿಸಿ ತನ್ನ ಶತ್ರುವನ್ನು ಓಡಿಸುತ್ತೆ ಈ ಪ್ರಾಣಿ

139867050_XS

ಕೆಟ್ಟ ವಾಸನೆಗೆ ಎಂಥವರಾದರೂ ಹೆದರಲೇಬೇಕು ಎಂದು ಈ ಪ್ರಾಣಿ ಹೇಳುವಂತಿದೆ. ಏಕೆಂದರೆ ಇದು ಮಾಡುವುದು ಅದನ್ನೇ..

ಅಮೆರಿಕಾ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ಕಾಣಸಿಗುವ ಪ್ರಾಣಿ ಸ್ಕಂಕ್. ಇದು ನೋಡಲು ಸುಂದರವಾದರೂ ಯಾರೂ ಇದನ್ನು ಸಾಕುವುದಿಲ್ಲ. ಇದಕ್ಕೆ ಕಾರಣ ಇದರ ಬಾಲದ ಬಳಿ ಇರುವ ಗ್ರಂಥಿಗಳು. ಈ ಗ್ರಂಥಿಯಲ್ಲಿ ಒಂದು ಬಗೆಯ ದ್ರವ ತುಂಬಿರುತ್ತದೆ. ಈ ದ್ರವ ತುಂಬ ದುರ್ವಾಸನೆ ಹೊಡೆಯುತ್ತದೆ. ಈ ದುರ್ವಾಸನೆಗೆ ಶತ್ರು ಪ್ರಾಣಿಗಳು ಇದರ ಬಳಿ ಸುಳಿಯುವುದಿಲ್ಲ. ಹಾಗೊಮ್ಮೆ ಶತ್ರು ದಾಳಿಯಾದರೆ ದುರ್ಗಂಧದ ದ್ರವವನ್ನು ಶತ್ರುವಿನ ಮೇಲೆ ಚಿಮ್ಮಿಸುತ್ತದೆ.

ಸ್ಕಂಕ್ ಗಳಲ್ಲಿ ಅನೇಕ ವಿಧಗಳಿದ್ದರೂ ಗಾತ್ರ ಮಾತ್ರ ಬೇರೆ ಬೇರೆಯಿರುತ್ತದೆ. ಎಲ್ಲವೂ ಕಪ್ಪು, ಬಿಳುಪಿನ ಬಣ್ಣವನ್ನೇ ಹೊಂದಿರುತ್ತದೆ. ಈ ಜಾತಿಗೆ ಸೇರಿದ ಪ್ರಾಣಿಗಳು ನಿಶಾಚರಿಗಳು. ರಾತ್ರಿ ಹೊತ್ತಿನಲ್ಲೇ ಇವು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇವು ಕೀಟ, ಇಲಿ, ಅಳಿಲು, ಮೊಟ್ಟೆ, ಪಕ್ಷಿಗಳನ್ನು ತಿನ್ನುತ್ತವೆ.

ಸ್ಕಂಕ್ ಗಳಲ್ಲಿರುವ ಗ್ರಂಥಿಗಳನ್ನು ತೆಗೆದುಬಿಟ್ಟರೆ ಅವನ್ನು ನಾವು ಮನೆಯಲ್ಲೇ ಸಾಕಬಹುದು. ಏಕೆಂದರೆ ಈ ಪ್ರಾಣಿಗೆ ತುಂಬ ಬೇಡಿಕೆ ಇದೆ. ಇದರ ಗ್ರಂಥಿಯಲ್ಲಿರುವ ದ್ರವ್ಯವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರಂತೆ!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...