alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭ

sravan-dd

ಆಷಾಢಮಾಸ ಮುಗಿದು ಶ್ರಾವಣ ಮಾಸದ ಆಗಮನವಾಗುತ್ತಿದೆ. ಶ್ರಾವಣ ಮಾಸ ಆರಂಭವಾಯಿತೆಂದರೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೆಣ್ಣು ಮಕ್ಕಳು ತವರಿನ ದಾರಿ ಕಾಯುತ್ತಾರೆ.

ಶ್ರಾವಣ ಮಾಸ ಹಿಂದೂಗಳ ಸಂಪ್ರದಾಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಈ ಮಾಸದಲ್ಲಿ ಶ್ರವಣ(ಕಿವಿ)ಗಳು ಒಳ್ಳೆಯದನ್ನು ಕೇಳಲಿ ಎಂದು ಹರಿಕತೆ, ಭಜನೆ ಮಾಡಲಾಗುತ್ತದೆ. ದೇವಾಲಯಗಳಲ್ಲಿಯೂ ಶ್ರಾವಣಮಾಸದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತದೆ.

ಶ್ರಾವಣಮಾಸದಲ್ಲಿ ಬರುವ ಒಂದೊಂದು ಹಬ್ಬಗಳಿಗೆ ತನ್ನದೇ ಆದ ಐತಿಹ್ಯವಿದೆ. ಮಹಿಳೆಯರು ಮಂಗಳಗೌರಿ, ಸಂಪತ್ ಗೌರಿ, ಸ್ವರ್ಣಗೌರಿ, ಶುಕ್ರಗೌರಿ ವ್ರತಗಳನ್ನಾಚರಿಸುತ್ತಾರೆ.

ಭೀಮನ ಅಮಾವಾಸ್ಯೆಯಂದು ಗಂಡನ ಪಾದಪೂಜೆ ನೆರವೇರಿಸುತ್ತಾರೆ. ಇನ್ನು ನಾಗಚೌತಿ, ನಾಗಪಂಚಮಿ, ರಕ್ಷಾ ಬಂಧನ ಮೊದಲಾದವು ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಾಗಿವೆ. ಶ್ರಾವಣಮಾಸದಲ್ಲಿ ಹೆಚ್ಚಿನ ಹಬ್ಬಗಳು ಬರುವುದರಿಂದ ವಿಶೇಷವಾಗಿ ಆಚರಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...