alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣು ಕಳೆದುಕೊಂಡ ಪತ್ನಿಗೆ ಇಂಥ ಉಡುಗೊರೆ ನೀಡಿದ ಪತಿ

ಪ್ರೀತಿ ಎಲ್ಲವನ್ನೂ ಮಾಡಿಸುತ್ತದೆ. ಪ್ರೀತಿ ವ್ಯಕ್ತಪಡಿಸಲು ತಾಜ್ ಮಹಲ್ ಉಡುಗೊರೆ ನೀಡಬೇಕೆಂದೇನೂ ಇಲ್ಲ. ಸಣ್ಣ ಸಣ್ಣ ಕೆಲಸಗಳು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ. ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ವಿಚ್ಛೇದನ ಪಡೆಯುವ ಈಗಿನ ಯುವಜನತೆ ಜಪಾನಿನ ತೊಶಿಯುಕಿ ಕುರ್ಕಿ ನೋಡಿ ಕಲಿಯಬೇಕಿದೆ.

ತೊಶಿಯುಕಿ ಕುರ್ಕಿ ಪತ್ನಿಗೆ ಕಣ್ಣಿಲ್ಲ. ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವ ಪತ್ನಿ ಕಣ್ಣು ಕಳೆದುಕೊಂಡಿದ್ದಾಳೆ. ಕಣ್ಣಿಲ್ಲವಾದ್ರೆ ಏನಾಯ್ತು ಮನಸ್ಸು, ಮೂಗು ಎಲ್ಲವೂ ಸರಿಯಿದೆಯಲ್ಲ. ಪತ್ನಿಯನ್ನು ಅತಿಯಾಗಿ ಪ್ರೀತಿಸುವ ತೊಶಿಯುಕಿ ಕುರ್ಕಿ ಮನೆ ಸುತ್ತಮುತ್ತ ಪತ್ನಿಗಾಗಿಯೇ ಸುವಾಸನೆಯುಳ್ಳ ಹೂವಿನ ತೋಟ ಬೆಳೆಸಿದ್ದಾರೆ.

ಹೂವಿನ ಸುಹಾಸನೆ ಪಡೆಯುತ್ತ ಕಣ್ಣಿಲ್ಲ ಎನ್ನುವ ನೋವನ್ನು ಮರೆತಿದ್ದಾಳೆ ತೊಶಿಯುಕಿ ಕುರ್ಕಿ ಪತ್ನಿ. 1956ರಲ್ಲಿ ತೊಶಿಯುಕಿ ಕುರ್ಕಿ ಮದುವೆ ನಡೆದಿತ್ತು. ಇಬ್ಬರು ಮಕ್ಕಳಿರುವ ಕಾರಣ 30 ವರ್ಷದ ನಂತ್ರ ದೇಶ ಸುತ್ತುವ ಪ್ಲಾನ್ ಮಾಡಿದ್ದ ತೊಶಿಯುಕಿ ಕುರ್ಕಿ. ಆದ್ರೆ ಅಂದುಕೊಂಡಂತೆ ಏನೂ ಆಗಲಿಲ್ಲ. ತೊಶಿಯುಕಿ ಕುರ್ಕಿ ಪತ್ನಿ ಮಧುಮೇಹದಿಂದ 2 ವಾರದಲ್ಲಿ ಕಣ್ಣು ಕಳೆದುಕೊಂಡಳು. ಇದಾದ ಮೇಲೆ ಒಂಟಿಯಾಗಿರುತ್ತಿದ್ದ ತೊಶಿಯುಕಿ ಕುರ್ಕಿ ಪತ್ನಿ ಮನೆಯಿಂದ ಹೊರಗೆ ಬರ್ತಿರಲಿಲ್ಲ.

ಪತ್ನಿಗೆ ಹೂವು ಅಂದ್ರಲ್ಲೂ ಗುಲಾಬಿ ಇಷ್ಟ ಎಂಬುದು ತೊಶಿಯುಕಿ ಕುರ್ಕಿಗೆ ಗೊತ್ತಿತ್ತು. ಹಾಗಾಗಿ ಮನೆ ಬಳಿ ಗುಲಾಬಿ ಗಿಡ ಬೆಳೆಸಲು ಶುರು ಮಾಡ್ದ. ಗಿಡದಿಂದ ಹೂ ಹೊರಗೆ ಬರ್ತಿದ್ದಂತೆ ತೊಶಿಯುಕಿ ಕುರ್ಕಿ ಪತ್ನಿ ಮನಸ್ಸು ತಿಳಿಯಾಗ್ತಾ ಬಂತು. ಆಕೆ ಮನೆಯಿಂದ ಹೊರಗೆ ಬರಲು ಶುರು ಮಾಡಿದ್ಲು. ಮೊದಲಿನಂತೆ ಮಾತನಾಡಲು ಶುರು ಮಾಡಿದ್ಲು. ಪತ್ನಿಗಾಗಿ ಶುರು ಮಾಡಿದ ಗುಲಾಬಿ ತೋಟ ನೋಡಲು ಎರಡು ಕಣ್ಣು ಸಾಲೋದಿಲ್ಲ. ಪ್ರತಿದಿನ ತೊಶಿಯುಕಿ ಕುರ್ಕಿ ಮನೆಗೆ 7000ಕ್ಕೂ ಹೆಚ್ಚು ಮಂದಿ ಗುಲಾಬಿ ಹೂ ನೋಡಲು ಬರ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...