alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಗೆ ಪ್ರಿಯಕರನೊಂದಿಗೆ ದೈಹಿಕ ಸಂಬಂಧ ಹೊಂದುವಾಸೆ…ಆದ್ರೆ….

woman-with-no-vagina

ಕೇಲಿ ಮೋಟ್ಸ್ ಅರಿಜೋನಾದ ಗ್ರಾಫಿಕ್ ಡಿಸೈನರ್. ತನ್ನ ಬಾಯ್ ಫ್ರೆಂಡ್ ಜೊತೆಗೆ ಸಹಜ ಲೈಂಗಿಕ ಸಂಬಂಧ ಹೊಂದಬೇಕು ಅನ್ನೋದು ಅವಳ ಆಸೆ. ಆದ್ರೆ ವಿಪರ್ಯಾಸ ಅಂದ್ರೆ ಕೇಲಿಗೆ ಗುಪ್ತಾಂಗವೇ ಇಲ್ಲ. MRKH ಅನ್ನೋ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ.

ಹುಟ್ಟುವಾಗ್ಲೇ ಈಕೆಗೆ ಗರ್ಭಕಂಠ, ಗರ್ಭಾಶಯ ಹಾಗೂ ಗುಪ್ತಾಂಗವಿಲ್ಲ. ಕೇಲಿಯ ಗೆಳೆಯ ರಾಬಿ ಲಿಮ್ಮರ್, ಆಕೆಯಲ್ಲಿರೋ ಈ ಕೊರತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ದೈಹಿಕ ಸಂಬಂಧದ ಕೊರತೆಯಿಂದ ತಮ್ಮ ಬಾಂಧವ್ಯಕ್ಕೇನೂ ಧಕ್ಕೆಯಿಲ್ಲ ಎನ್ನುತ್ತಾನೆ.

ಆದ್ರೆ ಲೈಂಗಿಕ ಸಂಬಂಧ ಹೊಂದಬೇಕು ಅನ್ನೋ ಆಸೆ ಇಟ್ಕೊಂಡಿರೋ ಕೇಲಿ ಅದಕ್ಕಾಗಿ ದಾನಿಗಳಿಂದ ಹಣ ಸಂಗ್ರಹಿಸುತ್ತಿದ್ದಾಳೆ. ಈ ಮೂಲಕ ಗುಪ್ತಾಂಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅವಳ ಉದ್ದೇಶ. ಕೇಲಿ ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡ್ತಾಳೆ. ನೋಡೋಕೂ ಸುಂದರವಾಗಿದ್ದಾಳೆ.

ಕಾಲೇಜಿನಲ್ಲಿದ್ದಾಗ್ಲೇ ಕೇಲಿ ಹಾಗೂ ರಾಬಿ ಲಿಮ್ಮರ್ ಪ್ರೀತಿಸಲಾರಂಭಿಸಿದ್ದರು. ತಮ್ಮ ಪ್ರೇಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕೆಂಬ ಆಸೆಯಿದ್ರು, ಅದಕ್ಕೆ ಬೇಕಾದ ಅಂಗವೇ ಕೇಲಿ ದೇಹದಲ್ಲಿಲ್ಲ. 18 ವರ್ಷವಾಗುವವರೆಗೂ ಇಂದೊಂದು ಬಹುದೊಡ್ಡ ಸಮಸ್ಯೆ ಅನ್ನೋದು ಕೇಲಿಗೆ ಗೊತ್ತೇ ಇರಲಿಲ್ಲ.

ಆಕೆ ಋತುಮತಿಯಾಗದೇ ಇದ್ದಾಗ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದರು. ಆಗ ಆಕೆಗಿರುವ ಸಮಸ್ಯೆ ಬಗ್ಗೆ ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ಮಾಡಿದ್ರೆ ಕೇಲಿ ಕೂಡ ಎಲ್ಲಾ ಮಹಿಳೆಯರಂತೆ ಸಹಜ ಲೈಂಗಿಕ ಸಂಬಂಧ ಹೊಂದುವ ಸಾಧ್ಯತೆಗಳು ಅಧಿಕವಾಗಿವೆ. ಹಾಗಾಗಿ ಆಕೆಯ ಸಹೋದರಿ ಕೂಡ ಹಣ ಸಂಗ್ರಹಕ್ಕೆ ನೆರವಾಗುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...