alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಗಿಂತ ಕಡಿಮೆಯೇನಿಲ್ಲ ಈ ಸೆಕ್ಸ್ ಡಾಲ್ಸ್

ಹೊಸ ವರ್ಷ 2018 ರಲ್ಲಿ ಅತ್ಯಂತ ಆಸಕ್ತಿದಾಯಕ ಹಾಗೂ ಹೊಸ ಸೆಕ್ಸ್ ಟ್ರೆಂಡ್ ಶುರುವಾಗುವ ಸಾಧ್ಯತೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

2018 ರಲ್ಲಿ ಸೆಕ್ಸ್ ಉದ್ಯಮವು ಉನ್ನತ ತಂತ್ರಜ್ಞಾನದ ಲೈಂಗಿಕ ಯಂತ್ರವನ್ನು ಮಾರುಕಟ್ಟೆಗೆ ತರುವ ನಿರೀಕ್ಷೆಯಿದೆ. ಈ ಆಟಿಕೆ ಕಂಪಿಸುವುದಲ್ಲದೆ ಸೆಕ್ಸ್ ಗೆ ಉತ್ತೇಜನ ನೀಡುವ ಶಬ್ಧವನ್ನು ಹೊರ ಹಾಕಲಿದೆ.

ಪ್ಲಾಸ್ಟಿಕ್ ಯುಗ ಹೋಗ್ತಿದೆ. ಮಾರುಕಟ್ಟೆಯಲ್ಲಿ ಅಸಲಿ ಎನ್ನಿಸುವಂತಹ ಸೆಕ್ಸ್ ಡಾಲ್ ಸಿಗಲಿದೆ. ಇದು ಸಂಗಾತಿ ಕೊರತೆಯನ್ನು ನೀಗಿಸುವ ಜೊತೆಗೆ ಸೆಕ್ಸ್ ಅನುಭವವನ್ನು ಹೆಚ್ಚಿಸಲಿದೆ.

ಪ್ರಸಿದ್ಧ ವ್ಯಕ್ತಿಗಳ ಫೋಟೋ ಅಥವಾ ವಿಡಿಯೋ ನೋಡಿ ಉತ್ತೇಜನಗೊಳ್ಳಬೇಕಾದ ಅಗತ್ಯವಿಲ್ಲ. ಪ್ರಸಿದ್ಧ ಪೋರ್ನ್ ಆನ್ಲೈನ್ ಪೋರ್ಟಲ್ ದಂಪತಿಗೆ ತಮ್ಮ ಲೈಂಗಿಕ ವಿಡಿಯೋವನ್ನು ಅಪ್ಲೋಡ್ ಮಾಡಲು ಅನುಮತಿ ನೀಡಿದೆ. ಅಂದ್ರೆ ನಿಮ್ಮ ಸಂಭೋಗದ ವಿಡಿಯೋವನ್ನು ನೀವು ಅಪ್ಲೋಡ್ ಮಾಡಿಕೊಂಡು ನೀವೇ ನೋಡಬಹುದಾಗಿದೆ.

ಟೆಲಿಲೋಡೋನಿಕ್ಸ್ ಆಟಿಕೆ ಯುವ ಜೋಡಿಗೆ ಸಹಾಯವಾಗಲಿದೆ. ಸಂಗಾತಿ ಬಹಳ ದೂರವಿದ್ದಲ್ಲಿ ಇದ್ರ ಮೂಲಕ ಕಂಪನವನ್ನು ಪಡೆಯಬಹುದಾಗಿದೆ.

2017 ರಲ್ಲಿ ಶುರುವಾದ ಸೆಕ್ಸ್ ಪಾರ್ಟಿಗಳು 2018 ರಲ್ಲೂ ಮುಂದುವರೆಯಲಿವೆ. ನಗ್ನ ಭೋಜನ, ಪಾರ್ಟಿ ಇವೆಲ್ಲವೂ ಸೆಕ್ಸ್ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲಿದೆ ಎಂದು ನಂಬಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...