alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯಿಂದ ಇಂಥ ಸೆಕ್ಸ್ ಸೀಕ್ರೆಟ್ ಮುಚ್ಚಿಡ್ತಾರೆ ಮಹಿಳೆಯರು

ಎಲ್ಲರ ಲೈಂಗಿಕ ಜೀವನ ಸುಖಮಯವಾಗಿರುತ್ತೆ ಎನ್ನಲು ಸಾಧ್ಯವಿಲ್ಲ. ಸಂಗಾತಿಗೆ ನೋವಾಗದಿರಲಿ ಎನ್ನುವ ಕಾರಣಕ್ಕೆ ಪತಿ ಅಥವಾ ಪತ್ನಿ ಅನೇಕ ಬಾರಿ ಸುಳ್ಳು ಹೇಳ್ತಾರೆ. ಸೆಕ್ಸ್ ಜೀವನ ಸುಖಕರವಾಗಿರದೇ ಇದ್ದರೂ ಸಂಭೋಗದಲ್ಲಿ ಸುಖ ಸಿಗದೆ ಹೋದ್ರೂ ಎಲ್ಲವೂ ಸರಿಯಾಗಿದೆ ಎನ್ನುವಂತೆ ನಾಟಕವಾಡ್ತಾರೆ. ಇದನ್ನು ಅನೇಕ ಮಹಿಳೆಯರು ಒಪ್ಪಿಕೊಂಡಿದ್ದಾರೆ. ಸೆಕ್ಸ್ ಸೀಕ್ರೆಟನ್ನು ಬಿಚ್ಚಿಟ್ಟಿದ್ದಾರೆ.

ಮಹಿಳೆಯೊಬ್ಬಳಿಗೆ ಮದುವೆಯಾಗಿ ಒಂದು ವರ್ಷ ಕಳೆದಿದೆಯಂತೆ. ಈವರೆಗೂ ಆಕೆ ಪರಾಕಾಷ್ಠೆ ತಲುಪಿಲ್ಲವಂತೆ. ಪತಿಗೆ ತನ್ನನ್ನು ಪರಾಕಾಷ್ಠೆಗೆ ಮುಟ್ಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಪತ್ನಿಗೆ ತಿಳಿದಿದೆಯಂತೆ. ಆತ ಪತ್ನಿ ಪರಾಕಾಷ್ಠೆ ತಲುಪುತ್ತಾಳೆ ಎಂದುಕೊಂಡಿದ್ದಾನಂತೆ. ಆತನ ಆತ್ಮವಿಶ್ವಾಸಕ್ಕೆ ಧಕ್ಕೆ ಬರಬಾರದೆಂಬ ಕಾರಣಕ್ಕೆ ಮಹಿಳೆ ಪರಾಕಾಷ್ಠೆ ತಲುಪಿದಂತೆ ನಾಟಕವಾಡ್ತಾಳಂತೆ.

ಇನ್ನೊಬ್ಬ ಮಹಿಳೆಗೆ ಒರಟು ಸೆಕ್ಸ್, ಹೊಸ ಹೊಸ ಪ್ರಯೋಗಗಳು ಇಷ್ಟವಂತೆ. ಆದ್ರೆ ಪತಿ ಇದಕ್ಕೆ ವಿರುದ್ಧ. ಮದುವೆಯಾಗಿ ಈಗಷ್ಟೇ ವರ್ಷ ಕಳೆದಿದೆ. ಮದುವೆಗೂ ಮುನ್ನ ಸೆಕ್ಸ್ ಲೈಫ್ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಸಮಯ ಸಿಕ್ಕಾಗ ತನ್ನ ಮನಸ್ಸಿನ ಆಸೆಯನ್ನು ಹೇಳ್ತೇನೆ ಎನ್ನುತ್ತಾಳೆ ಈ ಮಹಿಳೆ.

ಪತಿಯ ಅಸುರಕ್ಷಿತ ಸೆಕ್ಸ್ ನನಗೆ ಇಷ್ಟವಾಗಲ್ಲ ಎನ್ನುತ್ತಾಳೆ ಮತ್ತೊಬ್ಬ ಮಹಿಳೆ. ವಿದ್ಯಾವಂತ ಪತಿ ಸುರಕ್ಷತೆಯಿಲ್ಲದೆ ಸಂಭೋಗಕ್ಕೆ ಮುಂದಾಗ್ತಾನೆ. ಆತನ ವರ್ತನೆ ಸಿಟ್ಟು ತರಿಸುತ್ತದೆ. ಆದ್ರೆ ಸಿಟ್ಟನ್ನು ಹಿಡಿದಿಟ್ಟು ಪ್ರೀತಿಯಿಂದ ನಿರಾಕರಿಸುವ ನಾಟಕವಾಡ್ತಿದ್ದೇನೆ ಎನ್ನುತ್ತಾಳೆ ಈಕೆ.

ಎರಡು ಮಕ್ಕಳಾದ್ಮೇಲೆ ಸೆಕ್ಸ್ ಲೈಫ್ ನಲ್ಲಿ ಆಸಕ್ತಿಯಿಲ್ಲ. ಆದ್ರೆ ಪತಿ ಏನೂ ಬದಲಾಗಿಲ್ಲ. ಎಲ್ಲ ಮೊದಲಿನಂತೆ ಇದೆ ಅಂದುಕೊಂಡಿದ್ದಾನೆ. ನಾನು ಸೆಕ್ಸ್ ನಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದೇನೆ ಎನ್ನುತ್ತಾಳೆ ಈ ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...