alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಸಂಬಂಧಿ ಖಾಯಿಲೆ ಬಗ್ಗೆ ಜಾಗೃತರಾದ ಜನ

relationship_123_1502435858_618x347

ಜನರು ಸೆಕ್ಸ್ ಸಂಬಂಧಿ ಖಾಯಿಲೆಗಳಿಂದ ರಕ್ಷಣೆ ಪಡೆಯುವ ವಿಚಾರದಲ್ಲಿ ಜಾಗೃತರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಡೋಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ಈ ವಿಷ್ಯವನ್ನು ಹೇಳಿದೆ.

ನ್ಯಾಶನಲ್ ಸೆಂಟರ್ ಫಾರ್ ಹೆಲ್ತ್ ಸ್ಟಾಟಿಸ್ಟಿಕ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಪ್ರಪಂಚದ ಜನಸಂಖ್ಯೆಯಲ್ಲಿ ಶೇಕಡಾ 34ರಷ್ಟು ಪುರುಷರು ಕಾಂಡೋಮ್ ಬಳಕೆ ಶುರುಮಾಡಿದ್ದಾರಂತೆ. ಈ ಕಾರಣದಿಂದಾಗಿ ಕಾಂಡೋಮ್ ಮಾರಾಟದಲ್ಲಿ ಶೇಕಡಾ 14ರಷ್ಟು ಏರಿಕೆ ಕಂಡಿದೆಯಂತೆ.

18 ವರ್ಷದಿಂದ 44 ವರ್ಷದೊಳಗಿನ 20 ಸಾವಿರ ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಇದ್ರಲ್ಲಿ ಪಾಲ್ಗೊಂಡ ಶೇಕಡಾ 24 ಮಹಿಳೆಯರು ಹಾಗೂ ಶೇಕಡಾ 34 ಪುರುಷರು ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಸುವುದಾಗಿ ತಿಳಿಸಿದ್ದಾರೆ. 2011-2015ರ ಅಂಕಿಅಂಶಕ್ಕಿಂತ ಇದು ಹೆಚ್ಚಿದೆ.

ಮಹಿಳೆಯರ ವಿಚಾರದಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಈಗಲೂ ಕಡಿಮೆಯಿದೆ. ಆದ್ರೆ ಪುರುಷರಲ್ಲಿ ಏರಿಕೆಯಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಹರಡುವ ಮಾರಕ ರೋಗ ಹಾಗೂ ಸೋಂಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ. ಇದರಿಂದ ರಕ್ಷಣೆ ಪಡೆಯಲು ಕಾಂಡೋಮ್ ಬಳಸುವಂತೆ ಸಲಹೆ ನೀಡುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...