alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಶಾರೀರಿಕ ಸಂಬಂಧದ ವೇಳೆ ಏನೆಲ್ಲ ತಪ್ಪು ಮಾಡ್ತೇವೆ ಎಂಬುದು ಬಹುತೇಕರಿಗೆ ತಿಳಿಯುವುದೇ ಇಲ್ಲ. ತಿಳಿಯದೇ ಮಾಡಿದ ಈ ತಪ್ಪುಗಳು ಸಂಬಂಧ ಹಾಳು ಮಾಡುತ್ತವೆ. ಸಂಗಾತಿ ನಿಧಾನವಾಗಿ ದೂರವಾಗಲು ಕಾರಣವಾಗುತ್ತದೆ. ಹಾಗಾಗಿ ಸಂಭೋಗದ ವೇಳೆ ಅಪ್ಪಿತಪ್ಪಿಯೂ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಫ್ಲೋರ್ ಪ್ಲೇ (ಮುಂಕೇಳಿ) ನಿರ್ಲಕ್ಷ್ಯ ಸರಿಯಲ. ಸಂಭೋಗವೆಂದ್ರೆ ಕೊನೆ ತಲುಪುವುದೊಂದೇ ಅಲ್ಲ. ಸಂಭೋಗಕ್ಕಿಂತ ಮೊದಲು ಸಂಗಾತಿಯನ್ನು ಅದಕ್ಕೆ ಅಣಿ ಮಾಡಬೇಕಾಗುತ್ತದೆ. ಮುಂಕೇಳಿ ಸೆಕ್ಸ್ ಗೆ ಉತ್ತೇಜನ ನೀಡುವ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಅಗತ್ಯಕ್ಕಿಂತ ಹೆಚ್ಚು ಉತ್ಸಾಹ ಕೂಡ ಒಳ್ಳೆಯದಲ್ಲ. ಅತಿ ಉತ್ಸಾಹದಲ್ಲಿ ತಪ್ಪು ನಡೆದು ಹೋಗುತ್ತದೆ. ಪ್ರೀತಿ ಹೆಸರಿನಲ್ಲಿ ಸಂಗಾತಿಗೆ ನೋವಾಗುತ್ತದೆ. ಹಾಗಾಗಿ ಇದ್ರ ಬಗ್ಗೆ ಗಮನವಿರಲಿ.

ಎರಡು ಕೈಯಿಂದ ಮಾತ್ರ ಚಪ್ಪಾಳೆ ಹೊಡೆಯಲು ಸಾಧ್ಯ. ಸೆಕ್ಸ್ ಗೆ ಇಬ್ಬರ ಒಪ್ಪಿಗೆ ಬೇಕಾಗುತ್ತದೆ. ಒಬ್ಬರ ಮೇಲೆ ಒಬ್ಬರಿಗೆ ಕಾಳಜಿ, ಪ್ರೀತಿಯಿರಬೇಕು. ಸ್ವಾರ್ಥ ಯೋಚನೆ ಮಾಡದೆ ಸಂಗಾತಿ ಪರಿಸ್ಥಿತಿಯನ್ನೂ ನೋಡಿ ಹೆಜ್ಜೆ ಇಡಿ.

ಪ್ರತಿ ದಿನ ಒಂದೇ ಭಂಗಿ ಅಥವಾ ವಿಧಾನ ಸಂಗಾತಿ ನೀರಸಕ್ಕೆ ಕಾರಣವಾಗುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಹಾಗಾಗಿ ಪ್ರತಿದಿನವನ್ನು ಹೊಸದಾಗಿ ಕಳೆಯಲು ಯತ್ನಿಸಿ. ಸೆಕ್ಸ್ ನಲ್ಲಿ ಕೂಡ ಹೊಸ ಪ್ರಯೋಗವಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...