alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಸಂಭೋಗದಲ್ಲಿ ಈ ತಪ್ಪು ಬೇಡ

ಶಾರೀರಿಕ ಸಂಬಂಧದ ಬಗ್ಗೆ ನಿಮಗೆಷ್ಟೇ ಜ್ಞಾನವಿರಬಹುದು ಆದ್ರೆ ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಹೆದರಿಕೆ, ಗೊಂದಲವಾಗೋದು ಸಾಮಾನ್ಯ. ಕೆಲವೊಮ್ಮೆ ಓದಿ ತಿಳಿದಿದ್ದು ಯಾವ ಪ್ರಯೋಜನಕ್ಕೂ ಬರೋದಿಲ್ಲ. ಲೈಂಗಿಕತೆ, ಅದ್ರ ಸಮಸ್ಯೆ, ಕಾರ್ಯವಿಧಾನ, ಲೈಂಗಿಕ ಅಪರಾಧದ ಬಗ್ಗೆ ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ತಪ್ಪು ಮಾಹಿತಿಗಳು ಮುಂದಿನ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

ಒಂದು ವೇಳೆ ಮದುವೆಗೂ ಮೊದಲು ನಿಮ್ಮ ಗೆಳತಿ ಅಥವಾ ಬೇರೆ ಹುಡುಗಿ ಜೊತೆ ಸಂಬಂಧ ಬೆಳೆಸಲು ಬಯಸಿದ್ದರೆ ಮೊದಲು ಕಾರಣ ತಿಳಿದುಕೊಳ್ಳಿ. ನೀವು ಯಾವ ಕಾರಣಕ್ಕೆ ಸಂಬಂಧ ಬೆಳೆಸಲು ಇಚ್ಛಿಸಿದ್ದೀರೆಂಬುದು ನಿಮಗೆ ಸ್ಪಷ್ಟವಾಗಿರಲಿ. ಸ್ನೇಹಿತರ ಮಾತು ಕೇಳಿ, ಇಲ್ಲ ಅವರನ್ನು ಮೆಚ್ಚಿಸಲು ನೀವು ಶಾರೀರಿಕ ಸಂಬಂಧ ಬೆಳೆಸಿದ್ದರೆ ಈ ಸಂಬಂಧ ತುಂಬಾ ದಿನ ಗಟ್ಟಿಯಾಗಿರುವುದಿಲ್ಲ. ಹಾಗಾಗಿ ನಿಮ್ಮ ಮನಸ್ಸಿನ ಮಾತಿಗೆ ಮಹತ್ವ ನೀಡಿ.

ಸಂಭೋಗ ಮೊದಲ ಬಾರಿಯಿರಲಿ ಇಲ್ಲ ಹಲವು ಬಾರಿಯಾಗಿರಲಿ, ಸುರಕ್ಷತೆ ಬಗ್ಗೆ ಗಮನವಿರಲಿ. ಅಸುರಕ್ಷಿತ ಸಂಬಂಧ ಬೆಳೆಸುವುದು ಎಂದಿಗೂ ಒಳ್ಳೆಯದಲ್ಲ. ಪತ್ನಿ ಜೊತೆ ಸಂಬಂಧ ಬೆಳೆಸುತ್ತಿದ್ದು ಮಗು ಬಯಸಿಲ್ಲವಾದಲ್ಲಿ ಸುರಕ್ಷಿತ ಸೆಕ್ಸ್ ಗೆ ಮಹತ್ವ ನೀಡಿ. ಗರ್ಭಧಾರಣೆ ತಡೆಯುವ ಜೊತೆಗೆ ಲೈಂಗಿಕ ರೋಗಗಳನ್ನು ಇದ್ರಿಂದ ತಡೆಯಬಹುದಾಗಿದೆ.

ಸಂಗಾತಿಯನ್ನು ಸಂತೃಪ್ತಿಗೊಳಿಸಬೇಕೆಂಬುದು ಪ್ರತಿಯೊಬ್ಬರ ಬಯಕೆ ನಿಜ. ಹಾಗಂತ ಪೋರ್ನ್ ಸ್ಟಾರ್ ತರ ವರ್ತನೆ ಮಾಡುವುದು ಸರಿಯಲ್ಲ. ಮೊದಲು ಮೂಲಭೂತ ವಿಷ್ಯಗಳ ಬಗ್ಗೆ ಗಮನ ನೀಡಿ. ನಿಮ್ಮ ಅತಿಯಾದ ವರ್ತನೆ ನಿಮ್ಮ ಸಂಗಾತಿಗೆ ಭಯ ಹುಟ್ಟಿಸಬಹುದು ಎಚ್ಚರ.

ಸೆಕ್ಸ್ ಬಗ್ಗೆ ನಿರೀಕ್ಷೆ ಬೇಡ. ಸೆಕ್ಸ್ ಬಗ್ಗೆ ಕೇಳಿ ಅಥವಾ ಪೋರ್ನ್ ಸಿನಿಮಾಗಳನ್ನು ನೋಡಿ ತಿಳಿದುಕೊಂಡಿರುತ್ತೀರಾ. ಹಾಗಂತ ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳುವುದು ಸರಿಯಲ್ಲ. ಅನುಭವ ಹೇಗೆ ಇರಲಿ, ಅದನ್ನು ಎಂಜಾಯ್ ಮಾಡಿ.

ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಭಯ ಹೆಚ್ಚಿರುತ್ತದೆ. ಸಂಗಾತಿ ನಿಮ್ಮ ದೇಹವನ್ನು ಇಷ್ಟಪಡದಿದ್ದರೆ ಎಂಬ ಭಯ ಕಾಡುತ್ತಿರುತ್ತದೆ. ಈ ಬಗ್ಗೆ ತುಂಬಾ ಯೋಚಿಸುವುದು ಬೇಡ. ನಿಮ್ಮ ಮೇಲೆ ಹಾಗೂ ನಿಮ್ಮ ದೇಹದ ಮೇಲೆ ವಿಶ್ವಾಸವಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...