alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ಗಿಂತ ಮೊದಲು ಸೆಕ್ಸ್ ಎಷ್ಟು ಸುರಕ್ಷಿತ?

ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರು ಜಿಮ್ ಗೆ ಹೋಗುವ ಮೊದಲು ಸೆಕ್ಸ್ ಇಷ್ಟಪಡೋದಿಲ್ಲ. ಜಿಮ್ ಮೊದಲು ಸೆಕ್ಸ್ ಒಳ್ಳೆಯದಲ್ಲ ಎನ್ನುವ ಹೇಳಿಕೆ ಈಗ ಹಳೆಯದಾಯ್ತು. ಹೊಸ ಸಂಶೋಧನೆಯೊಂದು ಜಿಮ್ ಮೊದಲು ಲೈಂಗಿಕ ಸಂಬಂಧ ಬೆಳೆಸಿದ್ರೆ ಅದು ಸ್ನಾಯುಗಳ ಮೇಲೆ ಯಾವುದೇ ವಿಶೇಷ ಪ್ರಭಾವ ಬೀರುವುದಿಲ್ಲ ಎಂದಿದೆ.

ಆರೋಗ್ಯ ವೆಬ್ಸೈಟ್ ನಲ್ಲಿ ಪ್ರಕಟವಾದ ವರದಿಯೊಂದು ಹಳೆ ನಂಬಿಕೆಗೆ ವಿರುದ್ಧವಾಗಿದೆ. ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿದ್ದಾರೆ. 12 ಜನರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಅಧ್ಯಯನದಲ್ಲಿ ಪಾಲ್ಗೊಂಡವರು ರಾತ್ರಿ ಸೆಕ್ಸ್ ನಡೆಸಿ ಬೆಳಿಗ್ಗೆ ಜಿಮ್ ಗೆ ಹೋಗ್ತಿದ್ದರು.

ವಿಜ್ಞಾನಿಗಳ ಪ್ರಕಾರ 12 ಜನರ ಮೇಲೆ ಸೆಕ್ಸ್ ಯಾವುದೇ ಪ್ರಭಾವ ಬೀರಲಿಲ್ಲ. ಜಿಮ್ ನಲ್ಲಿ ತೂಕ ಇಳಿಸುವುದ್ರಿಂದ ಹಿಡಿದು ಯಾವುದೇ ವ್ಯಾಯಾಮಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಲೈಂಗಿಕ ಸಂಬಂಧ ಬೆಳೆಸಿ 12 ಗಂಟೆಯೊಳಗೆ ಜಿಮ್ ಗೆ ಹೋಗಲು ಬಯಸಿದ್ರೆ ಅದು ನಿಮ್ಮ ದೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳು ನಡೆಸಿದ ಈ ಅಧ್ಯಯನ ಎಲ್ಲರ ಮೇಲೆ ಪ್ರಭಾವ ಬೀರುತ್ತದೆ ಎನ್ನಲು ಸಾಧ್ಯವಿಲ್ಲ. ಅವರವರ ಸಾಮರ್ಥ್ಯವನ್ನು ಇದು ಅವಲಂಭಿಸಿರುತ್ತದೆ. ಲೈಂಗಿಕ ಸಾಮರ್ಥ್ಯ ಟೆಸ್ಟೋಸ್ಟೆರಾನ್ ಹಾರ್ಮೋನ್ ಮೇಲೆ ಅವಲಂಬಿತವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...