alex Certify
ಕನ್ನಡ ದುನಿಯಾ       Mobile App
       

Kannada Duniya

ಅನೇಕ ದಿನಗಳ ನಂತ್ರ ಶಾರೀರಿಕ ಸಂಬಂಧ ಬೆಳೆಸುವವರಿಗೆ ಇದು ತಿಳಿದಿರಲಿ

ಇಂದಿನ ಕಾಲದಲ್ಲಿ ಜನರಿಗೆ ಸಮಯ ಸಿಗ್ತಿಲ್ಲ. ಕೆಲಸ, ಮನೆ ಕೆಲಸದಲ್ಲಿ ಸೆಕ್ಸ್ ದೂರವಾಗ್ತಿದೆ. ವಾರ, ಹದಿನೈದು ದಿನ ಇಲ್ಲವೆ ಒಂದು ತಿಂಗಳು ಸಂಭೋಗದಿಂದ ದೂರ ಇರುವವರಿದ್ದಾರೆ. ಮಕ್ಕಳು, ಕೆಲಸ ಎಲ್ಲವೂ ಇದಕ್ಕೆ ಕಾರಣವಾಗಬಹುದು. 15 ದಿನಗಳು ಅಥವಾ ವಾರದ ನಂತ್ರ ಸಂಭೋಗಕ್ಕೆ ಮುಂದಾಗುವವರು ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ.

ಅನೇಕ ದಿನಗಳ ನಂತ್ರ ಒಂದಾಗುತ್ತಿದ್ದರೆ ಫೋರ್ ಪ್ಲೇ ಮುಖ್ಯವಾಗುತ್ತದೆ. ಮಿಲನಕ್ಕಿಂತ ಮೊದಲು ಉತ್ತೇಜನಗೊಳಿಸುವ ವಿಧಾನ ಇದಾಗಿದೆ. ಇದ್ರಿಂದ ದಂಪತಿ ಮಧ್ಯೆ ಇಷ್ಟು ದಿನವಿದ್ದ ಅಂತರ ಕಡಿಮೆಯಾಗಿ ಇಬ್ಬರೂ ಭಾವನಾತ್ಮಕವಾಗಿ ಒಂದಾಗಲು ನೆರವಾಗುತ್ತದೆ. ಇದ್ರಿಂದ ಮಿಲನ ಸಂತೃಪ್ತಿ ಹೆಚ್ಚಾಗುತ್ತದೆ.

ದೀರ್ಘ ಸಮಯದ ನಂತ್ರ ಮತ್ತೆ ಒಂದಾಗುತ್ತಿರುವ ಸಂಗಾತಿಯಲ್ಲಿ ಭಯವೊಂದು ಕಾಣಿಸಿಕೊಳ್ಳುತ್ತದೆ. ಆಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕಾಗುತ್ತದೆ. ಪ್ರತಿ ಬಾರಿ ಸಂಪೂರ್ಣ ಸುಖ ಬೇಕು ಎಂಬುದು ಮೂರ್ಖತನ. ಕೆಲವೊಮ್ಮೆ ಇಬ್ಬರ ಮನಸ್ಸು ಸಂತೋಷಗೊಳ್ಳುವುದು ಮುಖ್ಯವಾಗುತ್ತದೆ.

ನಿಮ್ಮನ್ನು ಸುಂದರವಾಗಿರಿಸಿಕೊಳ್ಳಿ. ಶೇವ್, ಪೆಡಿಕ್ಯೂರ್ ಸೇರಿದಂತೆ ಸೌಂದರ್ಯ ಹೆಚ್ಚಿಸಲು ಮುಂದಾಗಿ. ಮಾದಕ ಉಡುಪುಗಳನ್ನು ಖರೀದಿ ಮಾಡಿ. ಬಾಹ್ಯ ಸೌಂದರ್ಯ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ ಅನೇಕ ದಿನಗಳ ನಂತ್ರ ಮತ್ತೆ ಒಂದಾಗುತ್ತಿದ್ದರೆ ಕೋಣೆಯ ಒಳಾಂಗಣ ವಿನ್ಯಾಸವನ್ನು ಬದಲಿಸಬಹುದು. ಮೇಣದ ಬತ್ತಿ, ಹೊಸ ಬೆಡ್ ಶೀಟ್ ಎಲ್ಲವನ್ನು ಬಳಸಿ ಒಂದಾಗುವ ಕ್ಷಣವನ್ನು ಇನ್ನಷ್ಟು ಸುಂದರಗೊಳಿಸಬಹುದು.

ಒಂದೇ ಜಾಗ ಮೂಡನ್ನು ಹಾಳು ಮಾಡಬಹುದು. ಹಾಗಾಗಿ ಸಂಗಾತಿ ಜೊತೆ ಬೇರೆ ಕಡೆ ಸುತ್ತಾಡಲು ಹೋಗಬಹುದು. ಡೇಟ್ ಗೆ ಹೋಗುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಅನೇಕ ದಿನಗಳ ನಂತ್ರ ಮಹಿಳೆಯೇ ಹತ್ತಿರ ಬಂದ್ರೆ ಪುರುಷ ಸಂಗಾತಿ ಮತ್ತಷ್ಟು ಉತ್ಸಾಹಿತನಾಗ್ತಾನೆ. ಖುಷಿಯಾಗ್ತಾನೆ.

ಇಬ್ಬರೂ ರೋಮ್ಯಾಂಟಿಕ್ ಚಿತ್ರ ವೀಕ್ಷಣೆ ಮಾಡಿ. ಇದು ನಿಮ್ಮಲ್ಲಿರುವ ಇಚ್ಛೆಯನ್ನು ಬಡಿದೇಳಿಸುತ್ತದೆ. ಪರಸ್ಪರ ಪ್ರೀತಿ ವ್ಯಕ್ತಪಡಿಸಲು ನೆರವಾಗುತ್ತದೆ. ಬೆಡ್ ರೂಂ ಬೇಸರವೆನಿಸಿದ್ರೆ ಕಿಚನ್, ಬಾತ್ ರೂಂ, ಕಾರ್ ನಲ್ಲಿ ಸಂಬಂಧ ಬೆಳೆಸಬಹುದು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...