alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಜೀವನ ಹಾಳು ಮಾಡ್ತು ಸೆಕ್ಸ್ ವ್ಯಸನ

ಸೆಕ್ಸ್ ವ್ಯಸನ ನನ್ನ ಜೀವನವನ್ನು ಹಾಳು ಮಾಡಿದೆ. ಇದ್ರಿಂದ ಸಾಕಷ್ಟು ನೋವುಂಡಿದ್ದೇನೆ. ಸಾಕಷ್ಟು ಕಳೆದುಕೊಂಡಿದ್ದೇನೆ ಎಂದು ಬ್ರಿಟಿಷ್ ಮಹಿಳೆ ರೆಬೆಕಾ ಬಾರ್ಕರ್ ತನ್ನ ನೋವು ತೋಡಿಕೊಂಡಿದ್ದಾಳೆ. ಮಾಧ್ಯಮ ಜೊತೆ ಮಾತನಾಡಿದ ರೆಬೆಕಾ ತನ್ನ ಜೀವನದಲ್ಲಿ ಅನುಭವಿಸಿದ ಸಂಕಷ್ಟವನ್ನು ಎಲ್ಲರ ಮುಂದಿಟ್ಟಿದ್ದಾಳೆ.

ಖಿನ್ನತೆಗೊಳಗಾಗಿದ್ದ ರೆಬೆಕಾ ಅದಕ್ಕೆ ಔಷಧಿ ತೆಗೆದುಕೊಳ್ಳಲು ಶುರು ಮಾಡಿದ್ದಳು. ಆದ್ರೆ ಔಷಧಿ ಸೆಕ್ಸ್ ವ್ಯಸನಕ್ಕೆ ದಾರಿ ಮಾಡಿಕೊಟ್ಟಿತ್ತು. ದಿನಕ್ಕೆ 5ಕ್ಕಿಂತಲೂ ಹೆಚ್ಚು ಬಾರಿ ರೆಬೆಕಾ ಸೆಕ್ಸ್ ಬಯಸುತ್ತಿದ್ದಳಂತೆ. ಆರಂಭದಲ್ಲಿ ಆಕೆ ಸಂಗಾತಿ ಸಹಕಾರ ನೀಡ್ತಿದ್ದನಂತೆ. ನಂತ್ರ ರೆಬೆಕಾ ಮೇಲೆ ಅನುಮಾನ ಶುರುವಾಗಿತ್ತಂತೆ.

ರೆಬೆಕಾ ಬೇರೆ ಸಂಬಂಧ ಹೊಂದಿದ್ದಾಳೆ. ಅದನ್ನು ಮುಚ್ಚಿಡಲು ಈ ರೀತಿ ವರ್ತಿಸುತ್ತಿದ್ದಾಳೆಂದು ಭಾವಿಸಿದ ಸಂಗಾತಿ ರೆಬೆಕಾಳಿಂದ ದೂರವಾದ್ನಂತೆ. ತನ್ನ ಬಗ್ಗೆಯೇ ಅಸಹ್ಯಪಟ್ಟುಕೊಳ್ತಿದ್ದ ರೆಬೆಕಾ ಮನೆಯಿಂದ ಹೊರ ಬರಲು ಭಯಪಡುತ್ತಿದ್ದಳಂತೆ. ಯಡವಟ್ಟು ನಡೆದು ಹೋದ್ರೆ ಎಂಬ ಭಯ ಆಕೆಯನ್ನು ಕಾಡುತ್ತಿತ್ತಂತೆ. ಬೆಳಿಗ್ಗೆ ಎದ್ದ ತಕ್ಷಣ ರೆಬೆಕಾ ಸೆಕ್ಸ್ ಬಯಸುತ್ತಿದ್ದಳಂತೆ.

ರೆಬೆಕಾ ಸದ್ಯ ಫ್ರಾನ್ಸ್ ನಲ್ಲಿ ವಾಸವಾಗಿದ್ದಾಳೆ. ಚಿಕಿತ್ಸೆ ನಂತ್ರ ಸೆಕ್ಸ್ ವ್ಯಸನದಿಂದ ಹೊರ ಬಂದಿದ್ದಾಳೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿ ಸಾಕಷ್ಟು ಸುಧಾರಣೆ ಕಂಡಿದ್ದಾಳೆ.

ಈ ಲೈಂಗಿಕ ವ್ಯಸನ ಶೀಘ್ರದಲ್ಲಿಯೇ ರೋಗದ ಪಟ್ಟಿ ಸೇರಲಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಘೋಷಣೆ ಮಾಡಿದೆ. ಬ್ರಿಟನ್ ನಲ್ಲಿ ಈ ರೋಗದ ಸಂಖ್ಯೆ ಹೆಚ್ಚಾಗ್ತಿದೆ. ಮೂರರಲ್ಲಿ ಒಬ್ಬರು ಈ ರೋಗದಿಂದ ಬಳಲುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...