alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಬೆಳಕಾಗಿರ್ತಾರೆ ಇಂಥ ಮಕ್ಕಳು

2017_1image_13_51_208513796fathersonhug-ll

ಮಕ್ಕಳು ದೊಡ್ಡವರಾದಂತೆ ತಂದೆ-ತಾಯಿ ಬೇಡವಾಗ್ತಾರೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗ್ತಾ ಇವೆ. ಆದ್ರೆ ತಂದೆ-ತಾಯಿಯ ಕಷ್ಟ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮಕ್ಕಳಿದ್ದರೆ ಆ ಮನೆಯಲ್ಲಿ ಎಂದೂ ಗಲಾಟೆ, ಜಗಳವಾಗಲು ಸಾಧ್ಯವೇ ಇಲ್ಲ. ಜೊತೆಗೆ ಅನಾಥಾಶ್ರಮದ ಅವಶ್ಯಕತೆ ಇರುವುದಿಲ್ಲ.

ಈ ಸಣ್ಣ ಕಥೆ ಮನೆಯಲ್ಲಿ ಎಂಥ ಮಕ್ಕಳಿರಬೇಕೆನ್ನುವುದನ್ನು ಹೇಳುತ್ತೆ.

ಗುಪ್ತಾ ಎಂಬುವವರಿಗೆ 45 ವರ್ಷ ವಯಸ್ಸಿನಲ್ಲಿಯೇ ಪತ್ನಿ ತೀರಿ ಹೋಗಿದ್ದಳು. ಮಗನನ್ನು ನೋಡಿಕೊಳ್ಳಲು ಇನ್ನೊಂದು ಮದುವೆಯಾಗಿ ಅಂತಾ ಅನೇಕರು ಹೇಳಿದ್ರು. ಆದ್ರೆ ಇದಕ್ಕೆ ಗುಪ್ತಾ ಒಪ್ಪಲಿಲ್ಲ. ಹೆಂಡತಿಯ ನೆನಪಿಗಾಗಿ ಮಗನಿದ್ದಾನೆಂದು ಮಗನನ್ನು ದೊಡ್ಡವನನ್ನಾಗಿ ಮಾಡಿದ್ರು.

ಮಗ ಅಪ್ಪನ ಬ್ಯುಸಿನೆಸ್ ಜವಾಬ್ದಾರಿ ಹೊತ್ತುಕೊಂಡ. ಮದುವೆಯಾಗಿ ಒಂದು ವರ್ಷ ಕಳೆಯಿತು. ಒಂದು ದಿನ ಗುಪ್ತಾ ಊಟಕ್ಕೆ ಬಂದ್ರು. ಊಟದ ಜೊತೆ ಮೊಸರು ನೀಡುವಂತೆ ಸೊಸೆಗೆ ಹೇಳಿದ್ರು. ಮನೆಯಲ್ಲಿ ಮೊಸರಿಲ್ಲ ಎಂಬ ಉತ್ತರ ಸೊಸೆಯಿಂದ ಬಂತು. ಇದನ್ನು ಮಗ ಕೂಡ ಕೇಳಿದ್ದ. ಅಪ್ಪನ ನಂತ್ರ ಮಗ ಊಟಕ್ಕೆ ಬಂದ. ಸೊಸೆ ಗಂಡನ ಮುಂದೆ ಮೊಸರು ತಂದಿಟ್ಟಳು. ಈ ಬಗ್ಗೆ ಏನೂ ಮಾತನಾಡದೆ ಊಟ ಮಾಡಿ ಹೋದ ಮಗ.

ಕಚೇರಿಗೆ ಬಂದ ಮಗ ಗುಪ್ತಾರಿಗೆ ನಾಳೆ ನಿಮ್ಮ ಮದುವೆ ಎಂದ. ಗುಪ್ತಾರಿಗೆ ಆಶ್ಚರ್ಯವಾಯ್ತು. ನನಗೆ ಹೆಂಡತಿ ಅವಶ್ಯಕತೆ ಇಲ್ಲ. ನಿನಗೆ ಅಮ್ಮನ ಪ್ರೀತಿಯನ್ನು ನಾನೇ ನೀಡಿದ್ದೇನೆ. ಇನ್ನೇಕೆ ಮದುವೆ ಎಂದ್ರು.

ನಿಮಗೆ ಹೆಂಡತಿ ಬೇಕೆಂದು ಇಲ್ಲ ನನಗೆ ಅಮ್ಮ ಬೇಕೆಂದು ಮದುವೆ ಮಾಡ್ತಾ ಇಲ್ಲ. ನಿಮಗೆ ಮೊಸರು ನೀಡಲು ಒಬ್ಬರು ಬೇಕು. ಆ ಕಾರಣಕ್ಕೆ ಮದುವೆ ಮಾಡ್ತಿದ್ದೇನೆ. ನಾನು ನಾಳೆಯಿಂದ ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ತೇನೆ. ಪತ್ನಿಗೆ ಮೊಸರಿನ ಮಹತ್ವ ತಿಳಿಯಲಿ ಎನ್ನುವುದೇ ನನ್ನ ಉದ್ದೇಶ ಎನ್ನುತ್ತಾನೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...