alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಓದಲು ಪ್ರೇರೇಪಿಸುತ್ತೆ ಈ ರೋಬೋಟ್…!

ವಿಜ್ಞಾನಿಗಳು ಮಿನಿ ಹೆಸರಿನ ರೋಬೋಟ್ ಒಂದನ್ನು ಸಿದ್ಧಪಡಿಸಿದ್ದಾರೆ. ಈ ರೋಬೋಟ್ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಲಿದೆಯಂತೆ. ಜೊತೆಗೆ ಮಕ್ಕಳಿಗೆ ಓದಲು ನೆರವಾಗಲಿದೆಯಂತೆ. ಮಕ್ಕಳು ಯಾವ ರೀತಿ ಪುಸ್ತಕಗಳನ್ನು ಓದಬೇಕು ಎನ್ನುವ ಬಗ್ಗೆ ಸಲಹೆ ನೀಡುತ್ತದೆಯಂತೆ. ಇಷ್ಟೇ ಅಲ್ಲ ಮನುಷ್ಯರಂತೆ ಕಥೆ ಹೇಳಬಲ್ಲದಂತೆ.

ಒಮ್ಮೆ ಇದ್ರ ಜೊತೆ ಮಾತನಾಡಿದ ಮಕ್ಕಳು, ರೋಬೋಟ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರಂತೆ. ರೋಬೋಟ್ ಜೊತೆ ಕುಳಿತು ಓದಲು ಇಷ್ಟಪಟ್ಟಿದ್ದಾರಂತೆ. ಸಹಪಾಠಿಗಳಂತೆ ಈ ರೋಬೋಟ್ ಕೆಲಸ ಮಾಡುತ್ತದೆ ಎಂದು ವಿಸ್ಕೋಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೇಳಿದ್ದಾರೆ.

ಶೀಘ್ರದಲ್ಲಿಯೇ ಮನೆ-ಮನೆಗಳಿಗೆ ಈ ರೋಬೋಟ್ ಲಭ್ಯವಾಗಲಿದೆಯಂತೆ. ರೋಬೋಟ್ ಗೆ 25 ಪುಸ್ತಕಗಳನ್ನು ಅಳವಡಿಸಲಾಗಿದೆ. ರೋಬೋಟ್ ಮುಂದೆ ಮಕ್ಕಳು ಪುಸ್ತಕವನ್ನು ಜೋರಾಗಿ ಓದಿದ್ದೆ, ಮಕ್ಕಳು ಎಷ್ಟರ ಮಟ್ಟಿಗೆ ಪ್ರಗತಿ ಹೊಂದಿದ್ದಾರೆ ಎಂಬುದನ್ನು ರೋಬೋಟ್ ಹೇಳುತ್ತದೆಯಂತೆ. ಭಯಾನಕ ಕಥೆಗಳನ್ನು ಹೇಳಿದಾಗ, ನಾನು ಭಯಪಟ್ಟೆ ಎಂದು ಮನುಷ್ಯರು ಹೇಳುವಂತೆ ರೋಬೋಟ್ ಹೇಳುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...