alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ತೆಯಾಗಿದೆ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ

ವಿಜ್ಞಾನಿಗಳು ಥೇಟ್ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹವನ್ನು ಪತ್ತೆ ಮಾಡಿದ್ದಾರಂತೆ. ಭೂಮಿಯಷ್ಟೇ ದೊಡ್ಡದಾದ ಈ ಜಗತ್ತಿನಲ್ಲಿ ಮಾನವರ ವಾಸಕ್ಕೆ ಯೋಗ್ಯವಾದ ಉಷ್ಣಾಂಶವಿದೆ ಅಂತಾ ಹೇಳಲಾಗ್ತಿದೆ. ಈ ಗ್ರಹಕ್ಕೆ Ross 128b ಅಂತಾ ಹೆಸರಿಡಲಾಗಿದೆ.

11 ಜ್ಯೋತಿರ್ವರ್ಷಗಳಷ್ಟು ದೂರವಿರುವ ಈ ಗ್ರಹ ನಮ್ಮ ಸೌರಮಂಡಲದ ಕಡೆಗೆ ಬರುತ್ತಿದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು 70,000 ವರ್ಷಗಳಲ್ಲಿ ಇದು ಭೂಮಿಯ ಪಕ್ಕಕ್ಕೇ ಬರಲಿದೆಯಂತೆ. ಆದ್ರೆ ಈ ಗ್ರಹವನ್ನು ತಲುಪಲು ಮಾನವನಿಗೆ ಕನಿಷ್ಠ 140,000 ವರ್ಷಗಳೇ ಬೇಕು ಅಂತಾ ಅಂದಾಜಿಸಲಾಗಿದೆ.

ಭೂಮಿಯಷ್ಟೇ ಗಾತ್ರದ, ಇಷ್ಟೇ ಉಷ್ಣಾಂಶ ಹೊಂದಿರುವ ಗ್ರಹ ಅನ್ನೋದೇ ವಿಶೇಷ ಎನ್ನುತ್ತಾರೆ ಚಿಲಿ ದೇಶದ ಬಾಹ್ಯಾಕಾಶ ವಿಜ್ಞಾನಿಗಳು. ಹತ್ತಾರು ವರ್ಷಗಳ ಸಂಶೋಧನೆಯ ಬಳಿಕ ಈ ಗ್ರಹವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...