alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! ಈ ಹೋಟೆಲ್ ನಿರ್ಮಾಣ ವೆಚ್ಚವೇ 22,300 ಕೋಟಿ ರೂಪಾಯಿ

Abraj Kudai

ಸಿರಿವಂತರ ನಾಡು ಸೌದಿ ಅರೇಬಿಯಾ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದ್ದು 22,300 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹೋಟೆಲ್‌ ನಿರ್ಮಿಸುತ್ತಿದೆ.

ಹೌದು. ಪವಿತ್ರ ಮೆಕ್ಕಾಗೆ ಬರುವ ಲಕ್ಷಾಂತರ ಪ್ರವಾಸಿಗರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ಈ ಹೋಟೆಲ್ ನಿರ್ಮಾಣಕ್ಕೆ ಕೈ ಹಾಕಿದ್ದು ‘ಅರ್ಬಾಜ್‌ ಕುದಾಯ್‌’ ಎಂಬ ಹೆಸರಿನ ಈ ಹೋಟೆಲ್ ನಲ್ಲಿ 4 ಹೆಲಿಪ್ಯಾಡ್, 10 ಸಾವಿರ ಕೊಠಡಿ, 70 ರೆಸ್ಟೋರೆಂಟ್‌ ಇರಲಿದೆ.

ಮೆಕ್ಕಾದಲ್ಲಿ ನಿರ್ಮಾಣವಾಗುತ್ತಿರುವ ಈ ಹೋಟೆಲ್ 2017 ರಲ್ಲಿ ಕಾರ್ಯಾರಂಭ ಮಾಡಲಿದ್ದು, ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಬುರ್ಜ್‌ ಖಲೀಫಾವನ್ನು ಈ ಹೋಟೆಲ್‌ ಮೀರಿಸುವುದರ ಜತೆಗೆ ವಿಶ್ವದಲ್ಲಿಯೇ ದೊಡ್ಡ ಗೋಪುರವನ್ನೂ ಹೊಂದಲಿದೆ.

14 ಲಕ್ಷ ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹೋಟೆಲ್‌ ನಲ್ಲಿ 44 ಅಂತಸ್ತುಗಳು ಇದ್ದು, 12 ಗೋಪುರಗಳನ್ನು ಒಳಗೊಳ್ಳಲಿದೆ. ಸೌದಿಯ ರಾಜ ಮನೆತನಕ್ಕಾಗಿಯೇ ವಿಶೇಷ ಕೊಠಡಿಗಳನ್ನು ವಿನ್ಯಾಸ ಮಾಡಲಾಗುತ್ತಿದ್ದು, ಹೋಟೆಲ್ ನ ಜತೆಗೆ ವಿಶಾಲ ವೇದಿಕೆ ಒಳಗೊಂಡ ವಾಣಿಜ್ಯ ಸಂಕೀರ್ಣ, ಬಸ್‌ ನಿಲ್ದಾಣ, ಶಾಪಿಂಗ್‌ ಮಾಲ್‌ ಹಾಗೂ ಪುಡ್‌ ಕೋರ್ಟ್‌ಗಳೂ ‘ಅರ್ಬಾಜ್‌ ಕುದಾಯ್’ ನಲ್ಲಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...