alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗಲ್ಲ, ಪುರುಷರಿಗಾಗಿ ಸಿದ್ಧವಾಗಿತ್ತು ಈ ವಸ್ತು….

girl-things_4_i

ಕಿವಿಯೋಲೆ, ಸ್ಯಾನಿಟರಿ ಪ್ಯಾಡ್ ಮಹಿಳೆಯರಿಗೆ ಸೀಮಿತವಾದ ವಸ್ತುಗಳು. ಈಗ ಪುರುಷರು ಕಿವಿಯೋಲೆ ಹಾಕೋದು ಕಾಮನ್ ಆಗ್ಬಿಟ್ಟಿದೆ. ಆದ್ರೆ ಮೊದಲು ಹುಡುಗಿಯರ ಹಾಗೆ ಕಿವಿಯೋಲೆ ಹಾಕಿದಾನೆ ನೋಡು ಅಂತಾ ಟೀಕೆ ಮಾಡುತ್ತಿದ್ದರು.  ನಿಮಗೆ ಆಶ್ಚರ್ಯವಾಗಬಹುದು, ಕಿವಿಯೋಲೆ, ಸ್ಯಾನಿಟರಿ ಪ್ಯಾಡ್, ಹೈ ಹೀಲ್ಡ್ ಸೇರಿದಂತೆ ಅನೇಕ ವಸ್ತುಗಳು ಸಿದ್ಧವಾಗಿದ್ದು ಪುರುಷರಿಗಾಗಿ. ಸಮಯ ಸರಿದಂತೆ ಅವುಗಳನ್ನು ಹುಡುಗಿಯರು ಬಳಸ್ತಿದ್ದಾರೆ.

ಯಸ್, ಕೆಲ ವಸ್ತುಗಳ ಆವಿಷ್ಕಾರವಾಗಿದ್ದು ಪುರುಷರಿಗಾಗಿ. ಆದ್ರೀಗ ಅದು ಮಹಿಳೆಯರ ವಸ್ತುಗಳಾಗಿ ಬದಲಾಗಿವೆ.

ಸ್ಯಾನಿಟರಿ ಪ್ಯಾಡ್ : ಸ್ಯಾನಿಟರಿ ಪ್ಯಾಡ್ ಮೊದಲು ತಯಾರಾಗಿದ್ದು ಫ್ರಾನ್ಸ್ ನಲ್ಲಿ. ಯುದ್ಧಕ್ಕಾಗಿ ಇದನ್ನು ತಯಾರಿಸಲಾಯ್ತು. ಯುದ್ಧದಲ್ಲಿ ಗಾಯಗೊಂಡ ಸೈನಿಕರು ದೇಹದಿಂದ ಹೊರಹೋಗುವ ರಕ್ತವನ್ನು ತಡೆಗಟ್ಟಲು ಇದನ್ನು ಬಳಸುತ್ತಿದ್ದರು.

ಹೈ ಹೀಲ್ಡ್ : ಹೈ ಹೀಲ್ಡ್ ಧರಿಸಿ ಕ್ಯಾಟ್ ವಾಕ್ ಮಾಡ್ತಾರೆ ಹುಡುಗಿಯರು. ಆದ್ರೆ ಪರ್ಷಿಯನ್ ಸೈನಿಕರಿಗಾಗಿ ಇದನ್ನು ಮೊದಲು ತಯಾರಿಸಲಾಗಿತ್ತು. ಕುದುರೆ ಏರಲು ಸೈನಿಕರು ಹೈ ಹೀಲ್ಡ್ ಬಳಸುತ್ತಿದ್ದರು.

ಗುಲಾಬಿ ಬಣ್ಣ : ಗುಲಾಬಿ ಬಣ್ಣ ಹುಡುಗಿಯರಿಗೆ ಮೀಸಲು. ಹುಡುಗಿಯರ ನೆಚ್ಚಿನ ಬಣ್ಣ ಗುಲಾಬಿ. ಆದ್ರೆ 18ನೇ ಶತಮಾನದಲ್ಲಿ ಕೆಂಪು ಬಣ್ಣದ ಒಂದು ರೂಪ ಗುಲಾಬಿ ಬಣ್ಣವೆಂದು ಪರಿಗಣಿಸಲಾಗಿತ್ತು. ಇದನ್ನು ಯುದ್ಧಕ್ಕೆ ಹೋಲಿಸಲಾಗುತ್ತಿತ್ತು.

ಕಿವಿಯೋಲೆ : ಮೊದಲ ಬಾರಿ ಪರ್ಷಿಯನ್ ಸೈನಿಕರು ಕಿವಿಯೋಲೆ ತೊಡುತ್ತಿದ್ದರು. ಅರಮನೆಯಲ್ಲಿ ವಾಸಿಸುವ ಸೈನಿಕರ ಕಿವಿಯಲ್ಲಿ ಓಲೆಯನ್ನು ನೋಡಬಹುದಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...