alex Certify
ಕನ್ನಡ ದುನಿಯಾ       Mobile App
       

Kannada Duniya

ಶಿರಡಿ ದೇಗುಲಕ್ಕೆ 31.73 ಕೋಟಿ ರೂ. ಕಾಣಿಕೆ

baba

ಶಿರಡಿ: ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಕೆಲವು ದೇವಾಲಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬಂದಿದೆ.

ಹೀಗೆ ಕಾಣಿಕೆ ರೂಪದಲ್ಲಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಬರೋಬ್ಬರಿ 31.73 ಕೋಟಿ ರೂಪಾಯಿ ಸಲ್ಲಿಕೆಯಾಗಿದೆ. ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಶಿರಡಿ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ.

ನೋಟ್ ಬ್ಯಾನ್ ಬಳಿಕ, 31.73 ಕೋಟಿ ರೂ. ದೇಣಿಗೆ ಬಂದಿರುವುದಾಗಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

4.53 ಕೋಟಿ ರೂ. ಹಳೆಯ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳಾಗಿವೆ. ಕಳೆದ 50 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ 18.96 ಕೋಟಿ ರೂ. ಸಂಗ್ರಹವಾಗಿದೆ.

ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ 2.62 ಕೋಟಿ ಸೇರಿ ದೇಣಿಗೆಯಾಗಿ 4.25 ಕೋಟಿ ರೂ.ಸಂಗ್ರಹವಾಗಿದೆ. ಆನ್ ಲೈನ್ ನಲ್ಲಿ 1.46 ಕೋಟಿ ರೂ., ಬ್ಯಾಂಕ್ ಡಿ.ಡಿ. ಮೂಲಕ 3.96 ಕೋಟಿ ರೂ., ಮನಿ ಆರ್ಡರ್ ಮೂಲಕ 35 ಲಕ್ಷ ರೂ. ಸಲ್ಲಿಕೆಯಾಗಿದೆ.

ಇದರೊಂದಿಗೆ 73 ಲಕ್ಷ ರೂ. ಮೌಲ್ಯದ 2.9 ಕೆ.ಜಿ. ಚಿನ್ನ, 18 ಲಕ್ಷ ರೂ. ಮೌಲ್ಯದ 56 ಕೆ.ಜಿ. ಬೆಳ್ಳಿಯನ್ನು ಭಕ್ತರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...