alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಒಂಟಿಯಾಗಿ ಪ್ರಯಾಣ ಮಾಡುವ ಮೊದಲು ಇದನ್ನೋದಿ

train_imageಹುಡುಗಿಯರು ಈಗ ಏಕಾಂಗಿಯಾಗಿ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ. ಕೆಲಸದ ನಿಮಿತ್ತ ಅಥವಾ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ರೈಲಿನಲ್ಲಿ ಹೋಗುವುದು ಅನಿವಾರ್ಯ. ನೀವು ಸಾಕಷ್ಟು ಬಾರಿ ಒಂಟಿಯಾಗಿ ರೈಲಿನಲ್ಲಿ ಪ್ರಯಾಣ ಬೆಳೆಸಿರಬಹುದು. ಇನ್ಮುಂದೆ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮರೆಯಬೇಡಿ.

ರೈಲಿನಲ್ಲಿ ಮೇಲಿನ ಸೀಟ್ ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ಆ ಸೀಟ್ ಸಿಗದಿದ್ದಲ್ಲಿ ಸಹ ಪ್ರಯಾಣಿಕರಿಗೆ ಹೇಳಿ ಮೇಲಿನ ಸೀಟ್ ಆಯ್ಕೆ ಮಾಡಿಕೊಳ್ಳಿ. ಈ ಬರ್ತ್ ನಲ್ಲಿ ಪ್ರಯಾಣ ಮಾಡುವುದು ಕೆಳಗಿನ ಸೀಟ್ ಗಿಂತ ಸುರಕ್ಷಿತ.

ಚಿಕ್ಕವರಿರುವಾಗ ತಂದೆ-ತಾಯಿ ಹೇಳಿದ ಮಾತನ್ನು ಈಗಲೂ ಪಾಲಿಸಿ. ಅಪರಿಚಿತರ ಜೊತೆ ಮಾತನಾಡಬೇಡಿ. ಒಂಟಿಯಾಗಿ ಪ್ರಯಾಣ ಮಾಡುವ ಸಮಯದಲ್ಲಂತೂ ಈ ಸಾಹಸ ಬೇಡ.

ನೀವು ಪ್ರಯಾಣ ಬೆಳೆಸುವ ಬೋಗಿಯಲ್ಲಿ ನೀವೊಬ್ಬರೇ ಮಹಿಳೆ ಎಂದಾದಲ್ಲಿ ಟಿಟಿಇ ಬಳಿ ಹೇಳಿ ಬೋಗಿ ಬದಲಾಯಿಸಿಕೊಳ್ಳಿ.

ಮಲಗುವ ಮುನ್ನ ಉಳಿದಿರುವ ಖಾಲಿ ಜಾಗದಲ್ಲಿ ನಿಮ್ಮ ಬ್ಯಾಗ್ ಇಡಿ.

ರಾತ್ರಿ ವೇಳೆ ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿರಲಿ. ಪರ್ಸ್ ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಮಲಗುವಾಗ ತಲೆ ಕೆಳಗೆ ಪರ್ಸ್ ಇಟ್ಟು ಮಲಗಿ.

ನಿಮ್ಮ ಬಗ್ಗೆ ಯಾರಿಗೂ ವಿವರ ನೀಡಬೇಡಿ. ಫೋನ್ ನಲ್ಲಿ ಮಾತನಾಡುವಾಗ ಕೂಡ ನಿಮ್ಮ ಖಾಸಗಿ ವಿಷಯ ಹೊರಗೆ ತಿಳಿಯದಂತೆ  ನೋಡಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...