alex Certify
ಕನ್ನಡ ದುನಿಯಾ       Mobile App
       

Kannada Duniya

ಈ 18ರ ಯುವತಿಗೆ ಸಾವಿರ ಬಾರಿ ಮುರಿದಿದೆ ಮೂಳೆ

broken_bones_5_1488375223

ಸಬಲ್ ಪರ್ವೀನ್ ಗೆ ಈಗ 18 ವರ್ಷ. ನೋಡಲು ಪುಟ್ಟ ಮಗುವಿನಂತಿದ್ದಾಳೆ. ಕೂರಲು, ಮಲಗಲು, ಊಟ ಮಾಡಲು, ನಡೆದಾಡಲು ಅವಳಿಂದ ಸಾಧ್ಯವಿಲ್ಲ. ಚೆನ್ನಾಗಿ ಓದಿ ಬ್ಯಾಂಕ್ ಮ್ಯಾನೇಜರ್ ಆಗಬೇಕು ಅನ್ನೋದು ಅವಳ ಕನಸು.

ಬಿಹಾರದ ಭಾಗಲ್ಪುರದ ಸಬಲ್ ಪರ್ವೀನ್ ಗೆ ಆಸ್ಟಿಯೋಜೆನಸಿಸ್ ಇಂಪರ್ಫೆಕ್ಟಾ ಎಂಬ ಖಾಯಿಲೆಯಿದೆ. ಇದು ಅಪರೂಪದ ಆನುವಂಶಿಕ ರೋಗ, ಈ ಖಾಯಿಲೆಗೆ ತುತ್ತಾದವರ ಮೂಳೆಗಳು ಸುಲಭವಾಗಿ ಮುರಿದು ಹೋಗುತ್ತವೆ.

broken_bones_1_1488375222

ಈ ಮಾರಕ ಖಾಯಿಲೆಗೆ ತುತ್ತಾದ್ರೂ ಸಬಲ್ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ವಿಕಲಚೇತನೆ ಅನ್ನೋ ಹಣೆಪಟ್ಟಿ ತನಗೆ ಬೇಡ ಎನ್ನುತ್ತಾಳೆ. ಹುಟ್ಟಿದಾಗ ಈಕೆ ಸಹಜವಾಗಿಯೇ ಇದ್ಲು. 20 ದಿನಗಳಾದ ಬಳಿಕ ಅವಳ ದೇಹದಲ್ಲಿ ಬದಲಾವಣೆ ಗೋಚರಿಸಿತ್ತು. ಚರ್ಮ ತುಂಬಾ ತೆಳುವಾಗಿತ್ತು, ಗಾಬರಿಗೊಂಡ ತಾಯಿ ಘಜಲ ವೈದ್ಯರ ಬಳಿ ವಿಚಾರಿಸಿದಾಗ ಮಗುವಿನ ಎಲುಬು ತುಂಬಾ ದುರ್ಬಲವಾಗಿದೆ ಅಂತಾ ತಿಳಿಸಿದ್ದಾರೆ.

ಸಬಲ್ ಗೆ ಚಿಕ್ಕವಳಿದ್ದಾಗ್ಲೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಷಿಯಂ ನೀಡಲಾಗುತ್ತಿತ್ತು. ಆದ್ರೆ ದಿನಗಳು ಕಳೆದಂತೆಲ್ಲಾ ಅವಳ ಆರೋಗ್ಯ ಸಮಸ್ಯೆ ವೃದ್ಧಿಸುತ್ತಲೇ ಇತ್ತು. 6 ಸಹೋದರಿಯರ ಪೈಕಿ ಸಬಲ್ ದೊಡ್ಡವಳು. 24 ಗಂಟೆಗಳೂ ಅವಳ ನೆರವಿಗೆ ಯಾರಾದರೂ ಒಬ್ಬರು ಇರಲೇಬೇಕು. ಆದ್ರೆ ಒಬ್ಬ ರೋಗಿಯಂತೆ ಬದುಕುವುದು ಸಬಲ್ ಗೆ ಇಷ್ಟವಿಲ್ಲ.

ಅಮ್ಮನನ್ನೇ ಅವಲಂಬಿಸಿರುವುದು ನನಗಿಷ್ಟವಿಲ್ಲ, ಸ್ವಾವಲಂಬಿಯಾಗಿರಬೇಕೆಂದು ನನ್ನಾಸೆ. ಆದ್ರೆ ನನ್ನ ದೇಹ ಅದಕ್ಕೆ ಸಹಕರಿಸುತ್ತಿಲ್ಲ ಅಂತಾ ಬೇಸರದಿಂದ ಹೇಳಿಕೊಳ್ತಾಳೆ. ಚಿಕ್ಕ ಚಿಕ್ಕ ವಿಷಯಗಳಲ್ಲೇ ಸಂತೋಷ ಕಾಣುತ್ತ ಸಬಲ್ ಬದುಕು ಸವೆಸುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...