alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 4 ಶಸ್ತ್ರ ಚಿಕಿತ್ಸೆ ಮಾಡ್ತಾರೆ 89 ವರ್ಷದ ಸರ್ಜನ್

rusia

ಮಾಸ್ಕೋ: 60 ವರ್ಷವಾದರೆ ಸಾಕು ಅರಳು ಮರಳು ಎನ್ನುವವರೇ ಜಾಸ್ತಿ. ಆದರೆ, 89 ರ ಇಳಿ ವಯಸ್ಸಲ್ಲೂ ಉತ್ಸಾಹದಿಂದ ಇರುವ ವೈದ್ಯೆಯೊಬ್ಬರು ದಿನಕ್ಕೆ 4 ಶಸ್ತ್ರ ಚಿಕಿತ್ಸೆ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಾಸ್ಕೋದ ಯಾರ್ಜನ್ ಸಿಟಿ ಆಸ್ಪತ್ರೆಯ ವೈದ್ಯೆ ಅಲ್ಲ ಇಲಿನಿಂಚನ್ ಲುಸ್ಕಿನಾ ಅವರು ವಿಶ್ವದಲ್ಲಿಯೇ ಅತ್ಯಂತ ಹಿರಿಯ ಕರ್ತವ್ಯನಿರತ ಸರ್ಜನ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಪ್ರತಿದಿನ ಬೇಗನೆ ಏಳುವ ಅವರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಾರೆ. 1950 ರಿಂದ ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ಅವರಿಗೆ 6 ದಶಕಗಳಿಗೂ ಹೆಚ್ಚಿನ ಕಾಲದ ಅನುಭವ ಇದೆ.

ಉತ್ಸಾಹದ ಚಿಲುಮೆಯಾಗಿರುವ ಲುಸ್ಕಿನಾ ಅವಿವಾಹಿತರಾಗಿದ್ದಾರೆ. ನಿವೃತ್ತಿ ಹೊಂದದೆ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...