alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಯ ವಯಸ್ಸಲ್ಲೇ ಕನ್ಯತ್ವ ಕಳೆದುಕೊಳ್ತಾರೆ ಈ ಹುಡುಗೀರು

ಸಮೀಕ್ಷೆಯೊಂದರ ಪ್ರಕಾರ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರ ಲೈಂಗಿಕ ಚಟುವಟಿಕೆಗಳಲ್ಲಿ ಹಲವಾರು ವ್ಯತ್ಯಾಸಗಳಿವೆ.

ನಗರ ಪ್ರದೇಶದ ನಿವಾಸಿಗಳಿಗೆ ಹೋಲಿಸಿದಾಗ ಗ್ರಾಮೀಣ ಭಾಗದ ಮಹಿಳೆಯರು ಬಹುಬೇಗನೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂಬ ಮಾಹಿತಿ ಅಧ್ಯಯನದಲ್ಲಿ ತಿಳಿದು ಬಂದಿದೆ.

ಕುಟುಂಬ ಬೆಳವಣಿಗೆಯ ರಾಷ್ಟ್ರೀಯ ಸಮೀಕ್ಷೆ ವರದಿಯನ್ನು ಸಿ.ಡಿ.ಸಿ. ಬಿಡುಗಡೆ ಮಾಡಿದ್ದು, ಅದರಂತೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೇಗನೆ ಕನ್ಯತ್ವ ಕಳೆದುಕೊಳ್ಳುತ್ತಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಗ್ರಾಮೀಣ ಮಹಿಳೆಯರು ಸರಾಸರಿ 16.6 ವರ್ಷ ವಯಸ್ಸಿನಲ್ಲೇ ಲೈಂಗಿಕತೆಯನ್ನು ಹೊಂದುತ್ತಾರೆ. ನಗರ ಪ್ರದೇಶದಲ್ಲಿ ಸರಾಸರಿ 17.4 ವರ್ಷ ವಯಸ್ಸಿನವರು ಕನ್ಯತ್ವ ಕಳೆದುಕೊಳ್ಳುತ್ತಾರೆ.

ಗ್ರಾಮೀಣ ಪ್ರದೇಶದ ಶೇ. 24.8 ರಷ್ಟು ಮಹಿಳೆಯರು 3 ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ. ನಗರ ಪ್ರದೇಶದಲ್ಲಿ ಇಂತಹ ಮಹಿಳೆಯರ ಸಂಖ್ಯೆ ಶೇ. 19 ರಷ್ಟು ಇದೆ. ಹೀಗೆ ಅಧ್ಯಯನದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರ ಲೈಂಗಿಕ ಚಟುವಟಿಕೆಗಳ ಕುರಿತಾದ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...