alex Certify
ಕನ್ನಡ ದುನಿಯಾ       Mobile App
       

Kannada Duniya

ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ರೋಬೋಟ್ ಮನೆಪಾಠ

1439530006-7589ಶಾಲೆಗೆ ಹೋಗುವ ಮಕ್ಕಳು ಖಾಯಿಲೆಗೆ ತುತ್ತಾದಾಗ ಅವರು ತರಗತಿಗೆ ಹಾಜರಾಗಲು ಸಾಧ್ಯವಿರುವುದಿಲ್ಲ. ಇದರಿಂದ ಅವರು ಆ ಸಂದರ್ಭದ ಪಠ್ಯದಿಂದ ವಂಚಿತರಾಗುತ್ತಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ರೋಬೋಟ್ ಸಿದ್ಧವಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಇರ್ವಿನ್ ಸ್ಕೂಲ್ ಆಫ್ ಎಜುಕೇಶನ್ ನ ಸಂಶೋಧಕರಾದ ವೆರೋನಿಕಾ ನ್ಯೂಹಾರ್ಟ್ ಅವರು ಈ ಹೊಸ ಸಂಶೋಧನೆ ಮಾಡಿದ್ದಾರೆ. ಇವರು ಶೋಧಿಸಿರುವ ಟೆಲಿಪ್ರೆಸೆನ್ಸ್ ರೋಬೋ, ಖಾಯಿಲೆಯಿಂದ ಬಳಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ನೀಡುತ್ತದೆ. ಈ ರೋಬೋಟ್ ಕಾಲಿಗೆ ಚಕ್ರ ಇರುತ್ತದೆ ಮತ್ತು ಶರೀರದ ಮೇಲ್ಭಾಗದಲ್ಲಿ ಬಳಕೆದಾರರ ಚಿತ್ರವನ್ನು ಕಾಣಬಹುದಾಗಿದೆ.

ಈ ಉಪಕರಣದ ಸಹಾಯದಿಂದ ಖಾಯಿಲೆಗೆ ತುತ್ತಾದ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಲ್ಯಾಪ್ ಟಾಪ್ ಮೂಲಕ ತರಗತಿಯಲ್ಲಿ ನಡೆಯುತ್ತಿರುವ ಪಾಠಗಳನ್ನು ಕಲಿಯಬಹುದಾಗಿದೆ. ಈ ರೋಬೋಟ್ ಮೂಲಕ ಶಾಲೆಯ ಮಕ್ಕಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಕೂಡ ಮಾತನಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...