alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಯಾಗಲಿವೆ ರೋಬೊಟ್..!

robot_large-660x494

ಆಧುನಿಕ ಯುಗದಲ್ಲಿ ಪ್ರತಿಕ್ಷಣವೂ ಬದಲಾವಣೆಯಾಗುತ್ತಿರುತ್ತದೆ. ಆಧುನಿಕತೆ ಬೆಳೆದಂತೆಲ್ಲಾ ತಾಂತ್ರಿಕತೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳಾಗುತ್ತಿದ್ದು, ಹೊಸದನ್ನು ಸ್ವೀಕರಿಸುವ ಮನೋಭಾವವೂ ಹೆಚ್ಚಾಗಿದೆ. ಅವುಗಳಲ್ಲಿ ರೋಬೊಟ್ ಬಳಕೆಯೂ ಒಂದಾಗಿದೆ.

ಈಗಂತೂ ಪ್ರತಿಯೊಂದಕ್ಕೂ ರೋಬೊಟ್ ಬಳಸುವ ಪರಿಪಾಠ ಬೆಳೆಯತೊಡಗಿದೆ. ಇತ್ತೀಚೆಗಷ್ಟೇ ಕೃಷಿ ಕೆಲಸ ಮಾಡುವ ರೋಬೊಟ್ ಅಭಿವೃದ್ಧಿಪಡಿಸಲಾಗಿತ್ತು. ಆಟೋಮೊಬೈಲ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ರೋಬೊಟ್ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ತಾಂತ್ರಿಕತೆಯನ್ನು ಇನ್ನಷ್ಟು ಸುಧಾರಿಸಿ ಸಂಭಾಷಣೆ ಸೇರಿದಂತೆ ಭಾವನಾತ್ಮಕವಾಗಿಯೂ ಸ್ಪಂದಿಸುವ ರೋಬೊಟ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವೇ ಸಂಗಾತಿಗಳಾದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಾರೆ ಐರ್ಲೆಂಡ್ ಆಲ್ಸರ್ ವಿಶ್ವವಿದ್ಯಾಲಯದ ಡಾ. ಕೆವಿನ್ ಕುರ್ರನ್.

ಕೆಲವರು ತಮಗೆ ಇಷ್ಟವಾದ ಸಂಗಾತಿ ಸಿಗುತ್ತಿಲ್ಲ ಎಂದು ಕೊರಗುತ್ತಾರೆ. ಮನುಷ್ಯರೊಂದಿಗೆ ಭಾವನಾತ್ಮಕವಾಗಿಯೂ ಸ್ಪಂದಿಸುವ ರೋಬೊಟ್ ಗಳನ್ನು ಅಭಿವೃದ್ಧಿಪಡಿಸುವುದರಿಂದ ಎಲ್ಲಾ ಕೆಲಸ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಅಲ್ಲದೇ, ಕೆಲವು ವಯಸ್ಕರ ವೆಬ್ ಸೈಟ್ ಗಳಲ್ಲಿ ರೋಬೊಟ್ ಜೊತೆಗಿನ ಸೆಕ್ಸ್ ಕುರಿತು ಆಸಕ್ತಿ ಜಾಸ್ತಿಯಾಗಿದೆ. ರೋಬೊಟ್ ಮತ್ತು ಮನುಷ್ಯರ ನಡುವೆ ಸಾಮ್ಯತೆ ಹೆಚ್ಚಾದರೆ ಅವೇ ಉತ್ತಮ ಸಂಗಾತಿಯೂ ಆಗಬಹುದಾಗಿದೆ ಎಂಬ ಅಭಿಪ್ರಾಯ ವಿಜ್ಞಾನಿಗಳದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...