alex Certify
ಕನ್ನಡ ದುನಿಯಾ       Mobile App
       

Kannada Duniya

ಅಜೀರ್ಣಕ್ಕೆ ಇಲ್ಲಿದೆ ಮದ್ದು

stomach-ulcer

ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, ಎದೆ ಉರಿ, ಹೊಟ್ಟೆ ನೋವು, ವಾಂತಿಯಂತಹ ಸಮಸ್ಯೆಗಳು ಕಂಡು ಬರುವುದು ನಿಶ್ಚಿತ.

ಅಜೀರ್ಣ ನಿವಾರಣೆ ಹೇಗೆ..?
ಆಹಾರ ಪದಾರ್ಥಗಳಲ್ಲಿ ಏರುಪೇರು, ಎಣ್ಣೆ ಅಂಶದಿಂದ ಕೂಡಿದ ಹಾಗೂ ಅತಿಯಾದ ಸಿಹಿ ಪದಾರ್ಥಗಳ ಸೇವನೆಯಿಂದ ಅಜೀರ್ಣ ಉಂಟಾದರೆ, ಇನ್ನು ತಪ್ಪಿದ ಸಮಯದಲ್ಲಿ ಆಹಾರ ಸೇವನೆಯೂ ಇದಕ್ಕೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯದೆಡೆಗೆ ಗಮನ ಹರಿಸಿ ದೇಹಕ್ಕೆ ಹಿತವಾಗುವಷ್ಟು ಮಾತ್ರ ಆಹಾರ ಸೇವನೆಯನ್ನು ನಿಯಮಿತ ಸಮಯದಲ್ಲಿ ಸೇವಿಸುವುದರಿಂದ ಆಪಾಯ ತಪ್ಪಿಸಬಹುದಾಗಿದೆ.

ಅಜೀರ್ಣಕ್ಕೆ ಮನೆಮದ್ದು:
ಅಜೀರ್ಣ ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಿರುವವರು ಪ್ರತಿನಿತ್ಯ ನಿಂಬೆರಸ, ಜೇನು, ಶುಂಠಿ ರಸವನ್ನು ಒಂದೊಂದು ಚಮಚ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿದರೆ ಅಜೀರ್ಣ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ.
ಪ್ರತಿದಿನವೂ ಎಳನೀರು ಸೇವಿಸುವುದರಿಂದ ಅಜೀರ್ಣವನ್ನು ನಿವಾರಿಸುವುದರ ಜತೆಗೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ.
ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.
ನೇರಳೆ ಹಣ್ಣಿನ ರಸದ ಸೇವನೆಯಿಂದ ಹೊಟ್ಟೆ ಉರಿ, ಅಜೀರ್ಣ ಕಡಿಮೆಯಾಗುವುದಲ್ಲದೇ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.
ತೆಳ್ಳನೆಯ ಮಜ್ಜಿಗೆಗೆ ಒಂದು ಚಮಚ ಕೊತ್ತಂಬರಿ ರಸವನ್ನು ಬೆರೆಸಿ ಕುಡಿಯುವುದರಿಂದಲೂ ಅಜೀರ್ಣವನ್ನು ಕಡಿಮೆ ಮಾಡಬಹುದು.
ಆದರೆ ಇವೆಲ್ಲವುಗಳಿಗಿಂತ ಮುಖ್ಯವಾಗಿ ಅತಿಯಾದ ಚಹಾ, ಕಾಫಿ ಸೇವನೆ ಮಾಡುವುದು, ಸಿಗರೇಟು ಸೇವನೆ ಹೀಗೆ ಇಂತಹ ದುಶ್ಚಟಗಳನ್ನು ದೂರ ಮಾಡಿ ನಿಯಮಿತವಾದ ಆಹಾರ ಸೇವನೆ ಮಾಡಿದಲ್ಲಿ ಈ ಅಜೀರ್ಣತೆಯಿಂದ ಶಾಶ್ವತವಾಗಿ ಪಾರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...