ಮುಕೇಶ್ ಅಂಬಾನಿ ಮನೆ 200 ಕೋಟಿ ಡಾಲರ್ ಅಂದ್ರೆ ಸುಮಾರು 11 ಸಾವಿರ ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದೆ. ವಿಶ್ವದ ಅತಿ ದುಬಾರಿ ಮನೆಯ ಪಟ್ಟಿಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮನೆ ಕೂಡ ಸೇರಿದೆ. ಅಂಬಾನಿ ಮನೆಗೆ Antilia ಎಂದು ಹೆಸರಿಡಲಾಗಿದೆ.
ಮನೆ ಸಿಕ್ಕಾಪಟ್ಟೆ ದೊಡ್ಡದಾಗಿದ್ದು, ಮನೆಯಲ್ಲಿ 600 ಮಂದಿ ನೌಕರರು ಕೆಲಸ ಮಾಡ್ತಿದ್ದಾರೆ. ಮಹಲ್ ರೀತಿಯಲ್ಲಿ ಕಾಣುವ ಈ ಮನೆ ಮುಂಬೈನಲ್ಲಿದ್ದು, 27 ಮಹಡಿಗಳಿವೆ. 400000 ಸ್ಕ್ವೇರ್ ಫೀಟ್ ನಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಮನೆಯ ಪ್ರತಿಯೊಂದು ಕೋಣೆಯೂ ಬೇರೆ ಬೇರೆ ರೀತಿಯಲ್ಲಿದೆ. 2010ರಲ್ಲಿ ಈ ಮನೆ ನಿರ್ಮಾಣವಾಗಿದ್ದು, ಆ ವೇಳೆ ಮುಕೇಶ್ ಅಂಬಾನಿ ಮನೆ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗಿತ್ತು.
ಮೊದಲ 6 ಮಹಡಿಗಳನ್ನು ಪಾರ್ಕಿಂಗ್ ಗಾಗಿಯೇ ನಿರ್ಮಾಣ ಮಾಡಲಾಗಿದೆ. ಮನೆಯಲ್ಲಿ ಸುಮಾರು 168 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ. ಪಾರ್ಕಿಂಗ್ ನಂತ್ರ ಇರುವ ಮಹಡಿಯಲ್ಲಿ 50 ಸೀಟಿನ ಸಿನಿಮಾ ಹಾಲ್ ಇದೆ. ಪತ್ನಿ, ಮಕ್ಕಳು ಹಾಗೂ ಅಮ್ಮನ ಜೊತೆ ಮುಕೇಶ್ ಅಂಬಾನಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಮನೆಗೆ 9 ಲಿಫ್ಟ್ ಇದೆ. ಒಂದು ಸ್ಪಾ ಹಾಗೂ ಮಂದಿರವಿದೆ.