alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಿಂಗ್ ನ ನಾಲ್ಕು ಸತ್ಯಗಳು….

dating-game

ಮಹಿಳೆಯರೇ ಮುಂದು : ಡೇಟಿಂಗ್ ಆ್ಯಪ್ ಮೂಲಕ ನಡೆಸಿದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಶೇ.42 ರಷ್ಟು ಮಹಿಳೆಯರು ಡೇಟ್ ಪ್ಲಾನಿಂಗ್ ಮಾಡೋದ್ರಲ್ಲಿ ಮುಂದಿದ್ದಾರೆ. ಶೇ.53 ರಷ್ಟು ಮಹಿಳೆಯರು ವೃತ್ತಿಗಿಂತ ಹೆಚ್ಚಾಗಿ ಉತ್ತಮ ಸಂಬಂಧವನ್ನು ಆಯ್ಕೆ ಮಾಡಿಕೊಳ್ತಾರೆ.

ಶೇ.48 ರಷ್ಟು ಮಹಿಳೆಯರು ಬುದ್ಧಿವಂತರನ್ನು ಇಷ್ಟಪಟ್ರೆ, ಶೇ.52ರಷ್ಟು ಪುರುಷರು ಸೌಂದರ್ಯಕ್ಕೆ ಮರುಳಾಗ್ತಾರೆ. ಶೇ.47ರಷ್ಟು ಪುರುಷರು ಹಾಗೂ ಶೇ.48ರಷ್ಟು ಮಹಿಳೆಯರು ತಮ್ಮ ಸಂಗಾತಿಯ ಜೊತೆಗೆ ಫೇಸ್ಬುಕ್ ಪಾಸ್ವರ್ಡ್ ಶೇರ್ ಮಾಡಿಕೊಳ್ಳಲು ರೆಡಿಯಾಗಿದ್ದಾರೆ.

ಆನ್ ಲೈನ್ ನಲ್ಲೇ ಪ್ರೀತಿಯ ಹುಡುಕಾಟ : ಡೇಟಿಂಗ್ ಆ್ಯಪ್ ಗಳ ಸಂಖ್ಯೆ ಹೆಚ್ಚಿರೋದ್ರಿಂದ ಯುವಕ- ಯುವತಿಯರೆಲ್ಲ ಆನ್ ಲೈನ್ ನಲ್ಲೇ ತಮಗಿಷ್ಟವಾಗುವಂತಹ ಸಂಗಾತಿಗಾಗಿ ಹುಡುಕಾಟ ನಡೆಸ್ತಾರೆ. ತಮ್ಮ ಆದ್ಯತೆ, ಆಚಾರ- ವಿಚಾರ ಎಲ್ಲದಕ್ಕೂ ಹೊಂದುವಂತಹ ಪಾರ್ಟನರ್ ಗಾಗಿ ಸರ್ಚ್ ಮಾಡ್ತಾರೆ.

ಮೊದಲ ಡೇಟ್ ನಲ್ಲಿ ಕ್ರೀಡೆ ಬಗ್ಗೆ ಮಾತು : ಸಾಮಾನ್ಯವಾಗಿ ಫಸ್ಟ್ ಡೇಟ್ ಅಂದಾಗ ಹುಡುಗ- ಹುಡುಗಿ ಇಬ್ಬರಲ್ಲೂ ಮುಜುಗರ, ಸಂಕೋಜ ಸಹಜ. ಮಾತನಾಡಲು ವಿಷಯಗಳೇ ಸಿಗುವುದಿಲ್ಲ. ಎರಡೂ ಕುಟುಂಬಗಳ ಬಗ್ಗೆ ಚರ್ಚೆ ಆದ್ಮೇಲೆ ಕ್ರೀಡೆ ಬಗ್ಗೆ ಮಾತು ಹೊರಳಿಸ್ತಾರೆ. ಸಮೀಕ್ಷೆ ಪ್ರಕಾರ ಶೇ.21ರಷ್ಟು ಪುರುಷರು ಹಾಗೂ ಶೇ.14ರಷ್ಟು ಮಹಿಳೆಯರು ಮೊದಲ ಡೇಟ್ ನಲ್ಲಿ ಕ್ರೀಡೆ ಬಗ್ಗೆ ಮಾತನಾಡಲು ಇಷ್ಟಪಡ್ತಾರೆ.

ಪ್ರೇಯಸಿಯೇ ಪ್ರಶ್ನೆ ಕೇಳಲಿ ಅನ್ನೋ ಬಯಕೆ : ಸಂಪ್ರದಾಯದ ಪ್ರಕಾರ ಹುಡುಗ – ಹುಡುಗಿ ಮದುವೆಗೆ ಅಂತಾ ಭೇಟಿಯಾದಾಗ ಪ್ರಶ್ನೆ ಕೇಳುವ ಸರದಿ ಹುಡುಗನದ್ದು. ಆದ್ರೆ ಆ ಸಮಯದಲ್ಲಿ ಮನದನ್ನೆಯೇ ಪ್ರಶ್ನೆ ಕೇಳಲಿ ಅಂತಾ ಹುಡುಗ ಆಸೆಪಡ್ತಾನೆ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಶೇ.71.1ರಷ್ಟು ಯುವಕರು, ಯುವತಿಯೇ ತನಗೆ ಮೊದಲು ಪ್ರಪೋಸ್ ಮಾಡಲಿ ಅಂತಾ ಇಚ್ಛೆಪಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...